By Rons Bantwal

Pune , Nov 15 : Mangalorean Catholic Association Pune (MCA Pune) held Get-together programme on Sunday, 14th November 2021.


ಮಂಗಳೂರು ಕ್ಯಾಥೋಲಿಕ್ ಅಸೋಸಿಯೇಶನ್ ಪುಣೆ ಆಯೋಜಿಸಿದ್ದ ಸ್ನೇಹಮಿಲನ

ಮಾತೃಭಾಷೆಯಿಂದ ಮಾತ್ರ ಅಸ್ಮಿತೆಯ ಬದುಕು ಸಾಧ್ಯ: ಫ್ರಾನ್ಸಿಸ್ ಫೆರ್ನಾಡಿಸ್ ಕಾಸ್ಸಿಯಾ

ಮುಂಬಯಿ (ಆರ್‍ಬಿಐ), ನ. 14 : ಭಾಷೆ ಬೆಳವಣಿಗೆಯಿಂದ ಸಂಸ್ಕೃತಿ,, ಪರಂಪರೆಗಳ ಉಳಿವು ಸಾಧ್ಯ. ಇವುಗಳಿಗೆ ಕಲಾವಿದರ, ಸಾಹಿತಿ, ಬರಹಗಾರರ, ಸಂಘ ಸಂಸ್ಥೆಗಳ ಪಾತ್ರ ಮಹತ್ತರವಾದುದು. ಮಾತೃಭಾಷೆಗಳಿಂದ ಮಾತ್ರ ಅಸ್ಮಿತೆಯ ಬದುಕು ಕಟ್ಟುವುದು ಸುಲಭ ಸಾಧ್ಯ. ಪ್ರಾದೇಶಿಕ ಭಾಷೆಗಳಿಂದ ಬರಹಗಾರಿಕೆ, ಬರಹಗಾರರು ಸಶಕ್ತರಾಗುತ್ತಿದ್ದು ಇವರೆಲ್ಲರ ಪರಿಶ್ರಮದಿಂದ ಭಾಷೆ ಜೀವಂತವಾಗಿರಿಸಿದರೆ ಮಾತೃತ್ವ ಸೇವೆ ಸಾರ್ಥಕವಾಗುವುದು ಎಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೊಂಕಣಿ ನಾಟಕರ್ತೃ, ನಿರ್ದೇಶಕ, ಕಾಮೆಡಿ ಕಿಂಗ್ ಪ್ರಸಿದ್ಧಿಯ ಹಿರಿಯ ರಂಗನಟ ಫ್ರಾಂಕ್ ಪ್ರೊಡಕ್ಷನ್ ಕೊಂಕಣಿ ಥಿಯೇಟರ್ ಸಂಸ್ಥೆಯ ಸಂಸ್ಥಾಪಕ, ಫ್ರಾನ್ಸಿಸ್ ಫೆರ್ನಾಡಿಸ್ ಕಾಸ್ಸಿಯಾ ತಿಳಿಸಿದರು.

ಮಂಗಳೂರು ಕ್ಯಾಥೋಲಿಕ್ ಅಸೋಸಿಯೇಶನ್ ಪುಣೆ (ಎಂಸಿಎ ಪುಣೆ) ಸಂಸ್ಥೆಯು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಪುಣೆ ಕ್ಯಾಂಪ್ ಇಲ್ಲಿನ ಕೆನರಾ ಕಾಫಿ ಟ್ರೇಡಿಂಗ್‍ನ ಸಭಾಗೃಹದಲ್ಲಿ ಎಂಸಿಎ ಆಯೋಜಿಸಿದ್ದ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರಾಗಿದ್ದು ಫ್ರಾನ್ಸಿಸ್ ಕಾಸ್ಸಿಯಾ ಮಾತನಾಡಿದರು.

ಅತಿಥಿಗಳಾಗಿ ಹಿರಿಯ ರಂಗನಟ ಗ್ರೆಗೋರಿ ಸಿಕ್ವೇರಾ ನಿಡ್ಡೋಡಿ, ಪತ್ರಕರ್ತ ರೋನ್ಸ್ ಬಂಟ್ವಾಳ್, ಎಂಸಿಎ ಪುಣೆ ಇದರ ಅಧ್ಯಕ್ಷೆ ಎಡ್ನಾ ರೋಡ್ರಿಕ್ಸ್, ಗೌರವ ಕಾರ್ಯದರ್ಶಿ ವಿಜಯ್ ನೊರೊನ್ಹಾ ಪಾಂಬೂರು, ಮಾಜಿ ಅಧ್ಯಕ್ಷರುಗಳಾದ ಬೆಂಜಮಿನ್ ಮಥಾಯಸ್, ಅಲೋಸಿಯಸ್ ಸಲ್ಡನ್ಹಾ (ಲೂವಿ ಉರ್ವಾ) ವೇದಿಕೆಯಲ್ಲಿದ್ದರು.

ಗ್ರೆಗೋರಿ ಸಿಕ್ವೇರಾ ಮಾತನಾಡಿ ಕಲಾವಿದರಿಗೆ ಇಂತಹ ಸಂಸ್ಥೆಗಳು ಆಶ್ರಯವಾಗಿದೆ. ಮಾತೃಭಾಷೆಗಳು ಅಂದರೆ ನನಗೆ ತವರು ಮನೆಗೆ ಬಂದಂತೆ. ಆ ಪೈಕಿ ಇದೂ ಒಂದಾಗಿ ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿ ಮಾತೃಭಾಷೆಯ ಸೇವೆಗೆ ಪ್ರೇರೆಪಿಸಿದೆ ಎಂದರು.

ಬಂಟ್ವಾಳ್ ಮಾತನಾಡಿ ಸಂಸ್ಥೆಗಳು ಸಂಬಂಧಗಳನ್ನು ಬೆಳೆಸುವ ವೇದಿಕೆಗಳಾಗಬೇಕು. ಎಂಸಿಎ 26ರ ಸೇವೆಯಲ್ಲಿ ಇದನ್ನು ಕೆಸಿಎ ಪುಣೆ ಶಾಬೀತು ಪಡಿಸಿದೆ. ಹಿರಿಕಿರಿಯರನ್ನು ಒಗ್ಗೂಡಿಸಿ ಈ ಸಂಸ್ಥೆಯನ್ನು ಮುನ್ನಡೆಸಿರುವುದೇ ಕೆಸಿಎಯ ಸಾರ್ಥಕ ಸೇವೆಯಾಗಿದೆ ಎಂದರು.

ಎಂಸಿಎ ಪುಣೆ ಇದರ ಮುಖವಾಣಿ ಮೆಂಗ್ಳೂರಿಯನ್ ಇನ್ ಟಚ್ ಸುದ್ದಿಪತ್ರದ ಸಂಪಾದಕಿ ಜುಡಿತ್ ಮಿನೇಜಸ್ ಮತ್ತು ಸಹ ಸಂಪಾದಕಿ ಇವಾ ಡಿಸೋಜಾ, ಲಿನಿಟ್ ರೋಡ್ರಿಕ್ಸ್, ಜೆನಿಫರ್ ಮಿನೇಜಸ್, ಜೋನ್ ಕರ್ವಾಲೊ, ಮರೀನಾ ವೇಗಸ್ ಮತ್ತಿತರರು ಉಪಸ್ಥಿತರಿದ್ದರು.

ಲೂವಿ ಉರ್ವಾ ಪ್ರಾರ್ಥನೆಯನ್ನಾಡಿದರು. ಎಡ್ನಾ ರೋಡ್ರಿಕ್ಸ್ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಸುನಿತಾ ಡಿಸೋಜಾ ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಸಂಘಟಕಿ ಪ್ರ್ರೆಸ್ಸಿಲ್ಲಾ ಬ್ರಾಗ್ಸ್ ವಂದಿಸಿದರು.

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.