Media Release
Mangaluru, Feb 28 : A group of students from Japan’s Utsunomiya University visited Kalangann, Shaktinagar here on 28th February 2020, to know about Konkani language and culture.
ಕಲಾಂಗಣಕ್ಕೆ ಜಪಾನೀ ವಿದ್ಯಾರ್ಥಿಗಳ ಅಧ್ಯಯನ ಭೇಟಿ
ಜಪಾನಿನ ಯುಟ್ಸುನೋಮಿಯಾ ವಿಶ್ವವಿದ್ಯಾನಿಲಯದ (Utsunomiya) ವಿದ್ಯಾರ್ಥಿ ತಂಡವು ಭಾರತದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಕೊಂಕಣಿ ಭಾಷೆ-ಸಂಸ್ಕøತಿಯ ಬಗ್ಗೆ ಅರಿಯಲು ಶಕ್ತಿನಗರದ ಕಲಾಂಗಣಕ್ಕೆ 28-02-2020 ರಂದು ಭೇಟಿ ನೀಡಿತು.
ಕೊಂಕಣಿಯ ಭಾಷೆ, ಕಲೆ, ಸಂಸ್ಕøತಿಯ ವಿವಿಧತೆಗಳು, ವಿವಿಧ ಭಾಷಾ ಪ್ರಭೇದಗಳ ಬಗ್ಗೆ ಮಾಹಿತಿ ನೀಡಲಾಯಿತು. ಮಾಂಡ್ ಸೊಭಾಣ್ ನಡೆಸಿದ ವಿವಿಧ ಕಲಾ ಪ್ರಯೋಗಗಳು, ಗಿನ್ನೆಸ್ ದಾಖಲೆ, ತಿಂಗಳ ವೇದಿಕೆಯಂತಹ ನಿರಂತರ ಕಾರ್ಯಕ್ರಮಗಳು, ಬಯಲು ರಂಗ ಮಂದಿರ, ಆವರಣ ಗೋಡೆಗಳಲ್ಲಿನ ಉಬ್ಬು ಶಿಲ್ಪಗಳು, ಏಕತಾ ಗೋಡೆಯಲ್ಲಿನ ಶಿಲ್ಪಕಲಾ ಪ್ರತಿಮೆಗಳು, ಗುಮಟ್ ಹಾಡುಗಳ ಬಗ್ಗೆ ಹಾಗೂ ವಸ್ತು ಸಂಗ್ರಹಾಲಯದಲ್ಲಿರುವ ವಸ್ತು ವಿಶೇಷಗಳ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ವಿದ್ಯಾರ್ಥಿಗಳೊಡನೆ ಸಂವಾದ ನಡೆಯಿತು.
ರೋಶನಿ ನಿಲಯದ ವಿಭಾಗ ಮುಖ್ಯಸ್ಥರಾದ ಡಾ. ಜೊಸ್ಲಿನ್ ಲೋಬೊ ಮಾರ್ಗದರ್ಶನದಲ್ಲಿ ಆಗಮಿಸಿದ ಈ ಅಧ್ಯಯನ ತಂಡದಲ್ಲಿ ಉಮಿ, ಚಿಕುಝಾನ್, ಅಝಾನಾ, ಎಮಿ ಹಾಗೂ ಕಾನ ಇದ್ದರು. ಜಾಸ್ಮಿನ್ ಮಾರ್ಟಿಸ್ ಹಾಗೂ ಡಯಾನಾ ಡಿಸೋಜ ಸಂವಹಕರಾಗಿದ್ದರು.
ಮಾಂಡ್ ಸೊಭಾಣ್ ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಸಾರ್ವಜನಿಕ ಸಂಪರ್ಕಾಧಿಕಾರಿ ವಿಕ್ಟರ್ ಮತಾಯಸ್ ಹಾಗೂ ಸಮಿತಿ ಸದಸ್ಯರಾದ ಜೈಸನ್ ಸಿಕ್ವೇರಾ ಮತ್ತು ಜಾಸ್ಮಿನ್ ಲೋಬೊ ಮಾಹಿತಿ ನೀಡಿದರು.