Media Release

Mulki, Jan 24, 2024 : Friends' circle of Mr Rolphy Dcosta , Hejamadi, Mulki has come forward with the noble cause of providing free ambulance service to the villagers of Hejamadi.


ಹೆಜಮಾಡಿ ಗ್ರಾಮಸ್ಥರಿಗೆ ಆಂಬುಲೆನ್ಸ್  ಉಚಿತ ಸೇವೆ

ಹೆಜಮಾಡಿ ಗ್ರಾಮವು ಅತೀ ಹಿಂದುಳಿದ ಪ್ರದೇಶವಾಗಿದ್ದು, ಸರಿಸಮಾರು ಹತ್ತು ಸಾವಿರ (10,000) ಜನ ಸಂಖ್ಯೆ ಹೊಂದಿದ್ದು . ಇಲ್ಲಿಯ ಜನರು ಆರ್ಥಿಕವಾಗಿ ಕೃಷಿ ಹಾಗೂ ಮೀನುಗಾರಿಕೆ, ಕೂಲಿ ಕೆಲಸವನ್ನು ನಂಬಿಕೊಂಡಿದ್ದು, ಬಡವರಾಗಿರುತ್ತಾರೆ. ಈ ಪ್ರದೇಶದಲ್ಲಿ ವಾಹನ ಅಪಘಾತ ಹಾಗೂ ಅನಾರೋಗ್ಯದಿಂದ ಬಳಲುವವರಿಗೆ ಹೆಜಮಾಡಿಯಲ್ಲಿ ಸರಿಯಾದ ವೈದ್ಯಕೀಯ ಸವಲತ್ತು ಇಲ್ಲದ ಕಾರಣ ಚಿಕಿತ್ಸೆಗಾಗಿ ದೂರದ ಉಡುಪಿ, ಮಣಿಪಾಲ ಮತ್ತು ಮಂಗಳೂರಿನಲ್ಲಿರುವ ಆಸ್ಪತ್ರೆಗಳನ್ನು ನಂಬಿಕೊಂಡಿರುತ್ತಾರೆ. ಈ ಆಸ್ಪತ್ರೆಗಳಿಗೆ ರೋಗಿಗಳನ್ನು ಹಾಗೂ ಅಪಘಾತಕ್ಕೆ ಒಳಪಟ್ಟವರನ್ನು ತುರ್ತಾಗಿ ಕರೆದುಕೊಂಡು ಹೋಗಲು ಸೂಕ್ತ ಸಮಯದಲ್ಲಿ ಆಂಬುಲೆನ್ಸ್ ವಾಹನದ ಸೇವೆ ಲಭ್ಯವಿಲ್ಲದೆ ಹೆಚ್ಚಿನ ಕುಟುಂಬಗಳು ಸಂಕಷ್ಟವನ್ನು ಅನುಭವಿಸುವುದಲ್ಲದೇ, ಅದಕ್ಕೆ ಹೆಚ್ಚಿನ ಮೊತ್ತವನ್ನು ಭರಿಸಬೇಕಾದ ಅನಿವಾರ್ಯತೆ ಇರುತ್ತದೆ. ಇದನ್ನು ಮನಗಂಡ ಹೆಜಮಾಡಿ ಗೆಳೆಯರ ಬಳಗವು ಹೆಜಮಾಡಿ ಗ್ರಾಮಸ್ಥರಿಗೆ ಉಚಿತ ಸೇವೆಯನ್ನು ನೀಡುವರೇ ಆಂಬುಲೆನ್ಸ್ ವಾಹನವನ್ನು ದಿನಾಂಕ 28-01-2024 ರಂದು ಸಾರ್ವಜನಿಕವಾಗಿ ಧಾರ್ಮಿಕಮುಖಂಡರ ಆಶೀರ್ವಾದದೊಂದಿಗೆ ಗಣ್ಯರ ಉಪಸ್ಥಿತಿಯಲ್ಲಿ ಪಡುಬಿದ್ರಿ ಪೋಲೀಸ್ ಉಪನಿರೀಕ್ಷಕರಾದ ಶ್ರೀಯುತ ಪ್ರಸನ್ನರವರ ದಿವ್ಯ ಹಸ್ತದಿಂದ ಲೋಕಾರ್ಪಣೆಗೊಳಿಸಲು ನಿರ್ಧರಿಸಿರುತ್ತಾರೆ ಎಂದು ಸಮಿತಿಯ ಅಧ್ಯಕ್ಷರಾದ ಶ್ರೀ ಪೌಲ್ ರೋಲ್ಫಿ ಡಿ ಕೋಸ್ತ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಇದರ ಸದುಪಯೋಗವನ್ನು ಹೆಜಮಾಡಿ ಗ್ರಾಮಸ್ಥರೆಲ್ಲರೂ ಪಡೆದುಕೊಳ್ಳಬೇಕಾಗಿ ಈ ಮೂಲಕ ಕೇಳಿಕೊಳ್ಳಲಾಗಿದೆ.

1. ಶ್ರೀ ಪೌಲ್ ರೋಲ್ಫಿ ಡಿ ಕೋಸ್ತ - ಸಮಿತಿಯ ಅಧ್ಯಕ್ಷರು
2. ಶ್ರೀಮತಿ ರೇಶ್ಮಾ ಮೆಂಡನ್ - ಅಧ್ಯಕ್ಷರು ಗ್ರಾಮ ಪಂಚಾಯತ್ ಹೆಜಮಾಡಿ
3. ಶ್ರೀಮತಿ ಶಶಿಕಲಾ - ಅಧ್ಯಕ್ಷರು ಗ್ರಾಮ ಪಂಚಾಯತ್ ಪಡುಬಿದ್ರಿ
4. ಶ್ರೀ ಸುಭಾಶ್ ಜಿ. ಸಾಲ್ಯಾನ್ - ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹೆಜಮಾಡಿ
5. ಶ್ರೀ ಪಾಂಡುರಂಗ ಕರ್ಕೇರಾ - ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹೆಜಮಾಡಿ
6. ಶ್ರೀ ಸುಧೀರ್ ಕರ್ಕೇರಾ - ಅಧ್ಯಕ್ಷರು ಗ್ರಾಮೀಣ ಕಾಂಗ್ರೇಸ್ ಹೆಜಮಾಡಿ
7. ಶ್ರೀ ರಾಜು - ನಿವೃತ್ತ ಎಲ್ ಐ ಸಿ ಉದ್ಯೋಗಿ
8. ಶ್ರೀ ಸನಾ ಇಬ್ರಾಹಿಂ - ಸಮಿತಿಯ ಕಾರ್ಯದರ್ಶಿ
ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.