Media Release

Mangaluru, Dec 2, 2023 : Sacred Heart Career Academy's IICT Computer Training Centers are operating all over India, and on December 1st, a new center was inaugurated at Pinto Complex, Kulshekar, Mangaluru.


ಕುಲಶೇಕರದಲ್ಲಿ 158ನೇ ಐಐಸಿಟಿ ಕಂಪ್ಯೂಟರ್ ತರಬೇತಿ ಕೇಂದ್ರ ಶುಭಾರಂಭ

ಮಂಗಳೂರಿನ ಸೇಕ್ರೆಡ್ ಹಾರ್ಟ್‍ ಕೆರಿಯರ್ ಅಕಾಡೆಮಿ ಶಿಕ್ಷಣ ಸಂಸ್ಥೆಯ ಐಐಸಿಟಿ ಕಂಪ್ಯೂಟರ್ ತರಬೇತಿ ಕೇಂದ್ರಗಳು ಭಾರತ ದೇಶದಾದ್ಯಂತ ಕಾರ್ಯಾಚರಿಸುತ್ತಿದ್ದು, ಡಿಸೆಂಬರ್ 1ನೇ ತಾರೀಕಿನಂದು, ಮಂಗಳೂರು ಕುಲಶೇಖರದ ಪಿಂಟೋ ಕಾಂಪ್ಲೆಕ್ಸ್ ನಲ್ಲಿ ನೂತನಕೇಂದ್ರವು ಉದ್ಘಾಟನೆಗೊಂಡಿತು.

ಯಸ್.ಎಚ್. ಸಿ. ಕೆರಿಯರ್‍ಅಕಾಡೆಮಿ, ಬೆಂಗಳೂರು ಇದರ ಆಡಳಿತ ನಿರ್ದೇಶಕರಾದ ಶ್ರೀ ಕೆನೆಡಿ ಪಿ ಎ ಡಿಸೋಜನವರು ತಮ್ಮ ಪತ್ನಿ ಹಾಗೂ ಪುತ್ರಿಯರೊಂದಿಗೆ ಸಂಸ್ಥೆಯನ್ನು ಉದ್ಘಾಟಿಸಿ ಸಂಸ್ಥೆಯ ಬಗ್ಗೆ ಕಿರು ಪರಿಚಯವನ್ನು ನೀಡಿದರು. ಕುಲಶೇಖರದ ಹೋಲಿ ಕ್ರಾಸ್‍ಚರ್ಚಿನ ಧರ್ಮಗುರುಗಳಾದ ವಂದನೀಯ ಪಾವ್ಲ್ ಸೆಬೆಸ್ಟಿಯನ್ ಡಿಸೋಜಾರವರು ನೂತನ ಸಂಸ್ಥೆಯನ್ನು ಆರ್ಶೀವಾದಿಸಿದರು, ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪ್ಲಾವಿಯರವರು ಸಭಿಕರನ್ನು ಸ್ವಾಗತಿಸಿ, ಉಪಪ್ರಾಂಶುಪಾಲೆ ಶ್ರೀಮತಿ ಸುಜಿತಾ ಶಂಕರಲಿಂಗಂ ನವರು ಧನ್ಯವಾದ ಸರ್ಮಪಿಸಿದರು.

ನೂತನ ಐಐಸಿಟಿ ಕೇಂದ್ರದಲ್ಲಿ ಸಾಮ್ಯಾನ ಹಾಗೂ ಉನ್ನತ ತರಬೇತಿಗಳಾದ ಡಿಜಿಟಲ್ ಮಾಕೇಟಿಂಗ್ , ಅಡ್ವಾಂಸ್‍ ಎಕ್ಸೆಲ್, ಇಂಡಿಯನ್ & ಫಾರಿನ್ ಅಕೌಂಟಿಂಗ್, ಬ್ಯಾಂಕಿಂಗ್ & ಫೈನಾನ್ಸ್, ಸೊಪ್ಟ್ವೆರ್ ಇಂಜಿನಿರಿಂಗ್‍ಗಳಂತಹ ತರಬೇತಿಗಳನ್ನು ನೀಡಲಾಗುವುದೆಂದು ತಿಳಿಸಲಾಗಿದೆ.

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.