CT News

Mangaluru, Dec 18 : The Annual Sports Meet of Rosario High School and Primary was held on 17th December 2022 at the Rosario School ground. It commenced at 9 a.m. and was inaugurated by the Correspondent Rev.Fr. Alfred John Pinto and the Administrator Rev.Fr.Vinod Lobo. The Chief guest Sri Carippa Rai, the retired physical education instructor of high school graced the occasion. The Headmistress of Rosario High School Mrs Alice K J and of Rosario Primary Mrs. Mavis Serao were present. Tr Jeneview and Tr Roopa Nayak and Sir. Pradeep beautifully organized all the events. It went on well with the co–operation of the staff and the students of the Rosario Institutions.

ರೊಜಾರಿಯೊ ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ

17-12-2022 ರಂದು ರೊಜಾರಿಯೊ ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ ರೊಜಾರಿಯೊ ಕ್ರೀಡಾಂಗಣದಲ್ಲಿ ಜರುಗಿತು. ಕ್ರೀಡಾಕೂಟದ ಉದ್ಘಾಟನೆಯನ್ನು ರೊಜಾರಿಯೊ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಕಾರಿಯಪ್ಪ ರೈ ಕೆ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿ ತಮ್ಮ ಶುಭ ಸಂದೇಶದಲ್ಲಿ ರೊಜಾರಿಯೊ ವಿದ್ಯಾ ಸಂಸ್ಥೆಯ ಕ್ರೀಡಾಕೂಟದ ಭವ್ಯ ಇತಿಹಾಸವನ್ನು ಬಣ್ಣಿಸಿ ಕ್ರೀಡಾ ಕೂಟದಲ್ಲಿನ ನಿಯಮಗಳನ್ನು ತಿಳಿಸಿ ಕ್ರೀಡಾಳುಗಳಿಗೆ ಶುಭ ಹಾರೈಸಿ ಕ್ರೀಡಾಕೂಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು . ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಶಿಸ್ತು ಪ್ರಯತ್ನ, ಸಮಯ ಪ್ರಜ್ಞೆಯನ್ನು ಇಟ್ಟುಕೊಂಡು ಗುರಿ ಸಾಧನೆಯನ್ನು ಈಡೇರಿಸಲು ನಿರಂತರ ಶ್ರದ್ಧೆ ಇರಬೇಕು , ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಗುಣ ಇಟ್ಟುಕೊಂಡು ಪೋಷಕರ ಹೆಸರು ಹೆಚ್ಚಿಸುವ ಕೆಲಸವನ್ನು ಮಾಡಲು ಕಂಕಣ ಬದ್ಧರಾಗೋಣ ಎಂದು ಶುಭ ಹಾರೈಸಿದರು .

ವಿದ್ಯಾಸಂಸ್ಥೆಗಳ ಸಂಚಾಲಕರಾದ ಪೂಜ್ಯ ಫಾ. ಅಲ್ಫ್ರೆಡ್ ಜಾನ್ ಪಿಂಟೊ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ರೊಜಾರಿಯೊ ಚರ್ಚ್ನ ಸಹಾಯಕ ಧರ್ಮಗುರು ವಂ| ಫಾದರ್ ವಿನೋದ್ ಲೋಬೊ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಆಶೀರ್ವದಿಸಿದರು . ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಆಲಿಸ್ ಕೆ.ಜೆ, ಪೋಷಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು, ಅತಿಥಿಗಳು ಪಾರಿವಾಳಗಳನ್ನು ಆಕಾಶದೆತ್ತರಕ್ಕೆ ಹಾರಿಸಿದರು. ರೊಜಾರಿಯೊ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ವಂ| ಫಾದರ್ ವಿನೋದ್ ಲೋಬೋ ಕ್ರೀಡಾಕೂಟದಲ್ಲಿನ ಯಶಸ್ವಿಗೆ ಸಹಕಾರವನ್ನು ನೀಡಿದ ಎಲ್ಲರನ್ನೂ ನೆನಪಿಸಿಕೊಂಡು ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಕ್ಕೆ ವಿದ್ಯಾಭಿಮಾನಿಗಳ ಸಹಕಾರವನ್ನು ಕೋರಿ, ಕ್ರೀಡಾಕೂಟದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಕ್ರೀಡಾಕೂಟದ ಯಶಸ್ವಿಗೆ ಜೊತೆಗಿದ್ದು ಸಹಕಾರವನ್ನು ನೀಡಿದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಕಾರಿಯಪ್ಪ ರೈ.ಕೆ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕ್ರೀಡಾ ಕೂಟದ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು .

ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೇವಿಸ್ ಸೇರಾವೊ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆಲಿಸ್ ಕೆ.ಜೆ ವಂದಿಸಿದರು , ಶಿಕ್ಷಕಿ ಜೆನಿವಿವ್ ಜ್ಯೋತಿ ಡಿಸೋಜಾ ಹಾಗೂ ಶ್ರೀಮತಿ ರೂಪ ನಾಯಕ್ ಕಾರ್ಯಕ್ರಮ ನಿರೂಪಿಸಿದರು , ದೈಹಿಕ ಶಿಕ್ಷಕ ಶ್ರೀ ಕಾರಿಯಪ್ಪ ರೈ ಹಾಗೂ ಶಿಕ್ಷಕ ಶ್ರೀ ಪ್ರದೀಪ್ ಡಿ.ಎಮ್ ಹಾವಂಜೆ ಮತ್ತು ಶ್ರೀ ಲ್ಯಾನ್ಸಿ ಕ್ರಾಸ್ತಾ, ಶಿಕ್ಷಕ ಶ್ರೀ ಪ್ರೇಮ್ ರಾಜ್ , ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿಗಳು , ಸ್ವಯಂಸೇವಕರಾಗಿ ಸೇವೆಯನ್ನು ಸಲ್ಲಿಸಿದ ಪ್ರೌಢಶಾಲಾ ವಿದ್ಯಾರ್ಥಿಗಳು ಜೊತೆಯಾಗಿ ಕ್ರೀಡಾಕೂಟದಲ್ಲಿ ಸಹಕರಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು.

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.