Media Release

Belthangady, Mar 8 : Holy Redeemer School celebrated ‘National Science Day’ on March 6, 2021.


ಹೋಲಿ ರಿಡೀಮರ್ ಶಾಲೆಯಲ್ಲಿ ರಾಷ್ಟ್ರಿಯ ವಿಜ್ಞಾನ ದಿನಾಚರಣೆ

ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಅರಿವು ಮತ್ತು ಮಹತ್ವವನ್ನು ಮೂಡಿಸುವ ಸಲುವಾಗಿ ಹೋಲಿ ರಿಡೀಮರ್ ಶಾಲೆಯಲ್ಲಿ 2021 ಮಾರ್ಚ್ 6 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ. ವಿ. ರಾಮನ್ ರವರ ಜೀವನ ಸಾಧನೆಯನ್ನು ನೆನಪಿಸಿ ಗೌರವವನ್ನು ಸಲ್ಲಿಸಲಾಯಿತು. ಚಟುವಟಿಕೆಯ ಮೂಲಕ ಹಣ್ಣು ತರಕಾರಿಗಳ ಮಹತ್ವವನ್ನು ತಿಳಿಸಲಾಯಿತು. ಕೆಲವೊಂದು ಮೂಢನಂಬಿಕೆಗಳೆಂದು ಕರೆಸಿಕೊಳ್ಳುವ ಆಚರಣೆಗಳ ಹಿಂದೆ ಇರುವ ವೈಜ್ಞಾನಿಕ ಸತ್ಯವನ್ನು ಮನವರಿಕೆ ಮಾಡಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ವಂ. ಫಾ. ಜೇಸನ್ ಮೋನಿಸ್ ರವರು ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಕರೆನೀಡಿದರು. ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ವಿದ್ಯಾರ್ಥಿನಿ ಲವಿಟಾ ಲೋಬೊ ಕಾರ್ಯಕ್ರಮವನ್ನು ನಿರೂಪಿಸಿದರು. ವಿಜ್ಞಾನ ಶಿಕ್ಷಕಿ ಕು. ಕವಿತಾ ಸಹಕರಿಸಿದರು.

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.