Media Release

Panir - Ullal, Sep 17 : Sticker campaign was launched against drug consumption in Our Lady of Mercy Church, Panir on 17th September 2023. 


ಪಾನೀರಿನ ದಯಮಾತೆ ದೇವಾಲಯದಲ್ಲಿ ಡ್ರಗ್ಸ್ ಸೇವನೆ ವಿರೋಧಿಸಿ ಸ್ಟಿಕ್ಕರ್ ಅಭಿಯಾನಕ್ಕೆ ಚಾಲನೆ

ಸೆಪ್ಟೆಂಬರ್ 17ರಂದು ಭಾನುವಾರದ ಪ್ರಾರ್ಥನಾ ವಿಧಿಗಳ ನಂತರ ದಯಾಮಾತೆ ದೇವಾಲಯದ ಧರ್ಮಗುರುಗಳಾದ ವಂದನೀಯ ವಿಕ್ಟರ್ ಡಿಮೆಲ್ಲೊ ಮತ್ತು ದೇರಳಕಟ್ಟೆಯ ಫಾದರ್ ಮುಲ್ಲರ್ಸ್ ಹೊಮಿಯೋಪತಿಯ ವಿ.ಸಿ ಆಗಿರುವ ವಂದನೀಯ ಗುರುಗಳಾದ ಜಾನ್ ವಾಜ್ ರವರು ವಾಹನಗಳಿಗೆ ಅಂಟಿಸುವ ಡ್ರಗ್ಸ್ ಸೇವನೆ ವಿರೋಧಿ ಸ್ಟಿಕ್ಕರ್ ಅಭಿಯಾನಕ್ಕೆ ಚಾಲನೆ ನೀಡಿದರು. ಐ.ಸಿ.ವೈ.ಎಮ್ ಯುವಕ - ಯುವತಿಯರು ಡ್ರಗ್ಸ್ ವಿರೋಧಿ ಸ್ಟಿಕ್ಕರ್ ಅನ್ನು ವಿತರಿಸಿದರು ಮತ್ತು ವಾಹನಗಳಿಗೆ ಅಂಟಿಸಿದರು.

ಈ ಸಂದರ್ಭದಲ್ಲಿ ದಯಮಾತೆ ದೇವಾಲಯದ ಉಪಾಧ್ಯಕ್ಷರಾದ ಶ್ರೀಮತಿ ಸರಿತ ಡಿಸೋಜ , ಕಾರ್ಯದರ್ಶಿಗಳಾದ ಶ್ರೀಮತಿ ಗ್ರೇಟ್ಟ ಡಿಕುನ್ನ, ಮಂಗಳೂರು ಕಥೋಲಿಕ್ ಸಭೆಯ ಕೇಂದ್ರಿಯ ಅಧ್ಯಕ್ಷರಾದ ಶ್ರೀಯುತ ಅಲ್ವಿನ್ ಡಿಸೋಜ, ಪಾನೀರ್ ಕಥೋಲಿಕ್ ಸಭೆಯ ಅಧ್ಯಕ್ಷರಾದ ಉರ್ಬನ್ ಫೆರಾವೋ, ಎಸ್.ವಿ.ಪಿ ಸಭೆಯ ಅಧ್ಯಕ್ಷರಾದ ಶ್ರೀಯುತ ಫ್ರಾಂಕಿ ಕುಟ್ಟಿನ , ವಿವಿಧ ಸಂಘ ಸಂಸ್ಥೆಯ ಮತ್ತು ಐ.ಸಿ.ವೈ.ಎಂ ಹಾಗೂ ವೈ.ಸಿ.ಎಸ್ ನ ಪದಾಧಿಕಾರಿಗಳು ಮತ್ತು ಸದಸ್ಯರು, ಏಳು ಕಾನ್ವೆಂಟಿನ ಧರ್ಮಭಗಿನಿಯರು ಉಪಸ್ಥಿತರಿದ್ದರು.ಸರ್ವ ಕ್ರೈಸ್ತ ಬಂಧುಗಳು ಈ ಅಭಿಯಾನಕ್ಕೆ ಸಾಕ್ಷಿಗಳಾದರು.

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.