Media Release

Mangaluru, Sep 11 : Public awareness campaign against drugs was launched at God the Holy Spirit Church, Bajal on Sunday, September 10, 2023.


ಬಜಾಲ್ ಚರ್ಚಿನಲ್ಲಿ ಡ್ರಗ್ಸ್ ವಿರುದ್ಧ ಜನ ಜಾಗೃತಿ ಅಭಿಯಾನಕ್ಕೆ ಚಾಲನೆ

ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಆಗಿರುವ ಅತೀ ವಂದನೀಯ ಡಾಕ್ಟರ್ ಪೀಟರ್ ಪೌಲ್ ಸಲ್ದಾನರವರು ಸೆಪ್ಟೆಂಬರ್ ತಿಂಗಳನ್ನು ಮಾದಕ ದ್ರವ್ಯ ವಿರೋಧಿ ಮಾಸಾಚರಣೆಯನ್ನಾಗಿ ಆಚರಿಸಲು ಕರೆ ನೀಡಿದ್ದಾರೆ.

ಈ ನಿಟ್ಟಿನಲ್ಲಿ , ಪವಿತ್ರಾತ್ಮರ ದೇವಾಲಯ, ಬಜಾಲ್ ಇದರ ಸಂಘಟನೆಗಳಾದ ಭಾರತೀಯ ಕಥೊಲಿಕ್ ಯುವ ಸಂಚಾಲನ (ಐ.ಸಿ.ವೈ.ಎಮ್), ಯುವ ಕಥೊಲಿಕ ವಿಧ್ಯಾರ್ಥಿ ಸಂಚಾಲನ (YCS), CLC , ಕಥೊಲಿಕ್ ಸಭಾ, ಐಕ್ಯತೆ ಆಯೋಗ, ಸೇವೆ ಆಯೋಗ, ಸಾಕ್ಷಿ ಆಯೋಗಗಳ ಜಂಟಿ ಆಶ್ರಯದಲ್ಲಿ ಡ್ರಗ್ಸ್ ಜಾಗ್ರತಿ ಕಾರ್ಯಕ್ರಮವನ್ನು ಆದಿತ್ಯವಾರ ದಿನಾಂಕ 10-09-2023 ಬೆಳಗ್ಗಿನ ಬಲಿಪೂಜೆಯ ನಂತರ 8.30ಕ್ಕೆ ಬಜಾಲ್ ಚರ್ಚ್ ವಠಾರದಲ್ಲಿ ಹಮ್ಮಿಕೊಳ್ಳಲಾಯಿತು.

ಚರ್ಚಿನ ಧರ್ಮಗುರುಗಳಾದ ವಂದನೀಯ ಗುರು ಆಂಡ್ರೂ ಡಿಸೋಜರವರು ಮಾದಕ ವ್ಯಸನದಿಂದ ಸಂಕೋಲೆಯಲ್ಲಿ ಬಂಧಿಯಾದ ವ್ಯಕ್ತಿಯನ್ನು ಬಿಡುಗಡೆ ಗೊಳಿಸುವುದರ ಮೂಲಕ ಉದ್ಘಾಟನೆ ಮಾಡಿದರು, ಬಳಿಕ ಸರ್ವರನ್ನು ಉದ್ದೇಶಿಸಿ ಮಾತಾನಾಡಿದ ಫಾದರ್ ಆಂಡ್ರೂ ಡಿಸೋಜಾರವರು ದಿನದಿಂದ ದಿನ ನಮ್ಮ ಯುವಜನಾಂಗ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ, ಇದರ ಬಗ್ಗೆ ನಾವು ಜಾಗ್ರತರಾಗಿ ನಮ್ಮ ಯುವ ಜನಾಂಗವನ್ನು ಈ ಪಿಡುಗಿನಿಂದ ರಕ್ಷಿಸಬೇಕು ಎಂದು ಕರೆ ನೀಡಿದರು.

ಈ ಕಾರ್ಯಕ್ರಮಕ್ಕೆ ವಂದನೀಯ ಗುರು ಮೆಲ್ವಿನ್ ಪಿಂಟೊ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಾಕ್ಷರಾದ ಮೌರಿಸ್ ಡಿಸೋಜಾ, ಎಲ್ಲಾ ಆಯೋಗದ ಸಂಚಾಲಕರಾದ ಲಿಸ್ಟನ್ ಡಿಸೋಜಾ, ಸಾಕ್ಷಿ ಆಯೋಗದ ಸಂಚಾಲಕರಾದ ರೋಶನ್ ಮೊಂತೇರೊ, ಐಕ್ಯತೆ ಆಯೋಗದ ಸಂಚಾಲಕರಾದ ರೊಕಿ ಪಿಂಟೊ, ಸೇವೆ ಆಯೋಗದ ಸಂಚಾಲಕರಾದ ಇಗ್ನೇಶಿಯಸ್ ಡಿಸೋಜಾ, ಕಥೊಲಿಕ್ ಸಭೆಯ ಅಧ್ಯಾಕ್ಷರಾದ ಡೆರಿಲ್ ಲಸ್ರಾದೊ, CLC ಅಧ್ಯಕ್ಷರಾದ ಜೆಯ್ಸನ್ ಡಿಸೋಜಾ, YCS ಅಧ್ಯಕ್ಷ ಕ್ರಿಶ್ ಮಾರ್ಕ್ ಡಿಸೋಜಾ, ICYM ಸಚೇತಕ ರೊನಾಲ್ಡ್ ಫೆರ್ನಾಂಡಿಸ್ ಮತ್ತು ಅಧ್ಯಕ್ಷರಾದ ಪ್ರಜ್ವಲ್ ಲೋಬೊ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸಂಘಟನೆಗಳ ಸದಸ್ಯರು ಮತ್ತು ಚರ್ಚಿನ ಎಲ್ಲಾ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು. ಐನ್‌ಸ್ಟೈನ್ ಪಿಂಟೊ ಈ ಕಾರ್ಯಕ್ರಮವನ್ನು ನಿರೂಪಿಸಿದರು.

ಸೇರಿದ ಎಲ್ಲಾ ಸದಸ್ಯರು "ಡ್ರಗ್ಸ್ ತ್ಯಜಿಸಿ , ಜೀವನ ಆಲಂಗಿಸಿ" ಎಂಬ ಘೋಷಣೆಯನ್ನು ಕೂಗಿ ಕಾರ್ಯಕ್ರಮ ಮುಕ್ತಾಯಗೊಳಿಸಿದರು.

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.