ಹಾಗಾದರೆ ಗುರು ಎಂದರೆ ಯಾರು ? ವಿದ್ಯಾದಾನ ಮಾಡುವವನು, ಉಪಾಧ್ಯಾಯ, ಶಿಕ್ಷಕ ಎಂದರ್ಥ. ಶಿಷ್ಯನಾದವನು ಗುರುವಿನ ಮೇಲೆ ಪ್ರೀತಿ, ವಿಶ್ವಾಸ, ಗೌರವ, ಶ್ರದ್ಧೆಯನ್ನಿಡಬೇಕು, ಗುರು ಕರುಣೆಯಿಂದ ತನ್ನಆಧ್ಯಾತ್ಮಿಕ ಶಕ್ತಿಯನ್ನು ಶಿಷ್ಯನಿಗೆ ಧಾರೆಯೆರೆಯುತ್ತಾನೆ.

ಯಾವ ಗುರು ಶಿಷ್ಯನಿಗೆ ಶುದ್ಧ ಮನಸ್ಸು, ಸಧೃಡ ಆರೋಗ್ಯ, ವಿದ್ಯೆಕಲಿಸುತ್ತಾ, ದುಷ್ಪರಿಣಾಮ ಎಂಬ ಕೆಟ್ಟ ವಿದ್ಯೆಯನ್ನುನಾಶ ಮಾಡುವನೋ ಅವನೇ ನಿಜವಾದ ಗುರು ಎಂದು ಹೇಳಬಹುದು. ವಿದ್ಯಾದಾನವನ್ನು ಧಾರೆಯೆರೆದು ರಕ್ಷಿಸಿದವರನ್ನು ಗುರುಗಳೆಂದು ಪರಿಗಣಿಸಬೇಕು. ಗುರುಗಳು ಆಸನದ ಮೇಲೆ ಕುಳಿತು ಕೊಂಡಾಗ ಅದಕ್ಕೆ ವ್ಯಾಸಪೀಠವೆಂದು ಕರೆಯುತ್ತೇವೆ. ವ್ಯಾಸಪೀಠ ಸತ್ಯವನ್ನೇ ಮಾತನಾಡುತ್ತದೆ. ಗುರು ಎಂಬಾತರಿದ್ದರೆ ಯಶಸ್ಸುಅನ್ನುವುದನ್ನುಸುಲಭವಾಗಿ ಪಡೆದುಕೊಳ್ಳಬಹುದು, ಜೊತೆಗೆ ಶಿಷ್ಯರ ಪ್ರಯತ್ನವೂ ಅಷ್ಟೇ ಮುಖ್ಯ.

ಶಾಲೆ ಎಂಬುದು ವಿದ್ಯದೇಗುಲ, ಇಲ್ಲಿ ಪ್ರತಿದಿನವೂ ಶಿಕ್ಷಕರು ನೀಡುವ ಮಾರ್ಗದರ್ಶನದಲ್ಲಿ ಜ್ಞಾನದ ಜೊತೆಗೆ ಕೌಶಲ್ಯಗಳು, ತಾಳ್ಮೆ, ಸಹನೆ, ಜೀವನದ ಮೌಲ್ಯಗಳು, ನಾಯಕತ್ವ ಗುಣ, ಉತ್ತಮ ಗುಣನಡತೆ, ಭಾವೈಕ್ಯತೆ, ರಾಷ್ಟ್ರಪ್ರೇಮ, ಸ್ನೇಹಪರತೆ, ಪಠ್ಯೇತರ ಚಟುವಟಿಕೆಯನ್ನುವಿದ್ಯಾರ್ಥಿಗಳಾದವರು ಶಿಕ್ಷಕರಿಂದ ಕಲಿಯುತ್ತಾರೆ. ಗುರು ಇಲ್ಲದೆ ಗುರಿಯನ್ನು ತಲುಪುವುದು ಕಷ್ಟ. ಅಂತೆಯೇ ಶಿಕ್ಷಣಾರ್ಥಿಗಳಿಗೆ ಜ್ಞಾನ, ಸಾಮರ್ಥ್ಯ, ಕೌಶಲ್ಯ, ಮೌಲ್ಯಗಳನ್ನು ಪಡೆಯಲು ಸಹಾಯ ಮಾಡುವ ವ್ಯಕ್ತಿಯೇ ಶಿಕ್ಷಕರು. ವೈಯಕ್ತಿಕ ಯಶಸ್ಸು ಅನ್ನುವಂಥದ್ದು ವಿದ್ಯಾರ್ಥಿಯ ಆಂತರಿಕ ಗುರಿಯಾಗಿದೆ. ಒಬ್ಬ ವಿದ್ಯಾರ್ಥಿ ಡಾಕ್ಟರ್, ಎಂಜಿನಿಯರ್, ಶಿಕ್ಷಕ, ವಿಜ್ಞಾನಿ, ಸೈನಿಕ, ಕ್ರೀಡೆ ಹೀಗೆ ಯಾವುದೇ ಕ್ಷೇತ್ರದಲ್ಲಿದ್ದರೂ ಅಲ್ಲಿ ವಿದ್ಯಾರ್ಥಿ ಪರಿಶ್ರಮದ ಜೊತೆಗೆ ಗುರಿಗಳು ಮತ್ತು ಪೋಷಕರ ಪಾತ್ರ ಖಂಡಿತ ಇರುತ್ತದೆ.

ಗುರುಬ್ರಹ್ಮ ಗುರುವಿಷ್ಣು ಗುರುದೇವೋಮಹೇಶ್ವರ ಎಂಬ ಶ್ಲೋಕದ ತಾತ್ಪರ್ಯದಂತೆ ಶಾಲೆಯಲ್ಲಿ ಶಿಕ್ಷಣ ನೀಡುವಂತಹ ಗುರುಗಳು ದೇವರರೂಪ. ಮಕ್ಕಳು ಹೆತ್ತವರ ನುಡಿಗಳಿಗೆ ಆಲಿಸದಿದ್ದರೂ ಶಾಲೆಯ ಶಿಕ್ಷಕರ ನುಡಿಗೆ ಆಲಿಸುವರು. ಅದೆಷ್ಟೋ ಸಂದರ್ಭಗಳಲ್ಲಿ ಶಿಕ್ಷಕರಿಗೆ ತಲೆಬಾಗುತ್ತಾರೆ, ಹಾಗೆಯೇ ಗೌರವ ನೀಡುತ್ತಾರೆ ಮತ್ತು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾರೆ. ಕಾಲಬದಲಾದಂತೆ ವಿದ್ಯಾರ್ಥಿ ಶಿಕ್ಷಕರ ಸಂಬಂಧವೂ ಬದಲಾಗುತ್ತಾ ಬಂದಿದೆ. ಶಿಕ್ಷೆಇಲ್ಲದೆ ಶಿಕ್ಷಣ ಇಲ್ಲ, ಹಾಗೆಂದ ಮಾತ್ರಕ್ಕೆ ಶಿಕ್ಷಕರು ಕೇವಲ ದಂಡನೆಯ ಮೂಲಕವೇ ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವುದು ಎಂದಲ್ಲ. ಜ್ಞಾನದ ಜೊತೆಗೆ ಶಿಕ್ಷಕರು ಸೂಕ್ತ ಮಾರ್ಗದರ್ಶನ ಸಮಾಲೋಚನೆಗಳ ಮೂಲಕ ವಿದ್ಯಾರ್ಥಿಗಳನ್ನು ತಿದ್ದುವ ಕೆಲಸಕೂಡ ಮಾಡುತ್ತಿದ್ದಾರೆ.

ಇತ್ತೀಚಿನ ಬದಲಾದ ಸನ್ನಿವೇಶದಲ್ಲಿ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಆತ್ಮೀಯರಾಗಿರುವುದು ಕಂಡುಬರುತ್ತಿದೆ. ಅದು ಹಿತಮಿತವಾಗಿದ್ದರೆ ಉತ್ತಮ.

ಶಿಕ್ಷಕರು ತನ್ನ ಜ್ಞಾನದ ಬೆಳಕನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆದು ಅವರ ಬಾಳಿನಲ್ಲಿ ಆಶಾಜ್ಯೋತಿಯನ್ನು ಬೆಳಗಿಸುವ ಗುರುಗಳಿಗೆ ದ್ರೋಹಬಗೆದರೆ ಅದು ಅವನತಿಗೆ ಕಾರಣವಾಗುತ್ತದೆ. ಆದುದರಿಂದ ಎಲ್ಲರೂ ಸಮಾಜದಲ್ಲಿ ಪ್ರತಿಯೊಬ್ಬರನ್ನೂ ಗೌರವಿಸುವುದು ಅತಿಮುಖ್ಯ.

- ಸಿಂಧು
ಸಂತ ಅಲೋಶಿಯಸ್ ಶಿಕ್ಷಣಸಂಸ್ಥೆ, ಮಂಗಳೂರು

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.