CT News
Mangaluru, July 10 : Catholic Sabha Mangalore Pradesh (R) in association with various other associations celebrated Environment Day at Mukka Church near here on July 10, 2019.
ಕಥೊಲಿಕ್ ಸಭಾ ವತಿಯಿಂದ ಮುಕ್ಕ ಚರ್ಚ್‌ನಲ್ಲಿ ಪರಿಸರ ದಿನಾಚರಣೆ
July 10 : ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ.), ಸುರತ್ಕಲ್ ವಲಯ ಮತ್ತು ಘಟಕಗಳ ವತಿಯಿಂದ ಪರಿಸರ ಜಾಗೃತಿ ಅಭಿಯಾನ - 2019 ಪ್ರಯುಕ್ತ ಅರಣ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ಮುಕ್ಕದ ಚರ್ಚ್ ವಠಾರದಲ್ಲಿ ಜುಲೈ 7, 2019 ರಂದು ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಂಗಳೂರು ಧರ್ಮಪ್ರಾಂತ್ಯ ಶ್ರೇಷ್ಠ ಗುರು ಮ್ಯಾಕ್ಸಿಂ ಎಲ್. ನೊರೊನ್ಹಾ ಅಶೀರ್ವಚನಗೈದರು. ಮುಖ್ಯ ಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಂಗಳೂರು ಉತ್ತರ ಕ್ಷೇತ್ರ ಶಾಸಕ ಡಾ.ವೈ ಭರತ್ ಶೆಟ್ಟಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಕಿನ್ನಿಗೋಳಿ ವಲಯ ಅರಣ್ಯಾಧಿಕಾರಿ ಕೆ.ಸಿ ಮ್ಯಾಥ್ಯು ಪರಿಸರ ಸಂರಕ್ಷಣೆ ಮತ್ತು ಮಳೆ ನೀರು ಇಂಗಿಸುವಿಕೆ ಬಗ್ಗೆ ಮಾಹಿತಿ ನೀಡಿದರು.
ಕಥೋಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕ ಫಾ| ಮ್ಯಾಥ್ಯು ವಾಸ್, ಸುರತ್ಕಲ್ ವಲಯದ ಫಾ| ಪಾವ್ಲ್ ಪಿಂಟೊ, ಫಾ| ಸಿರಿಲ್ ಪಿಂಟೊ, ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್, ಕಥೊಲಿಕ್ ಸಭಾ ಕೇಂದ್ರೀಯ್ ಸಮಿತಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿ’ಕೋಸ್ತ, ಮುಕ್ಕ ಘಟಕ ಅಧ್ಯಕ್ಷ ಸಂತೋಷ್ ಸಿಕ್ವೇರಾ, ಪರಿಸರ ಸಂರಕ್ಷಣಾ ಸಮಿತಿ ಸಂಚಾಲಕ ಹೆನ್ರಿ ವಾಲ್ಡರ್, ಮುಕ್ಕ ಚರ್ಚ್ ಸಮಿತಿಯ ಉಪಾಧ್ಯಕ್ಷ ರೋಶನ್ ಡಿಸೋಜ, ಕಾರ್ಯದರ್ಶಿ ಶೈಲಾ ಡಿ’ಸೋಜ ಉಪಸ್ಥಿತರಿದ್ದರು.
ಕಥೋಲಿಕ್ ಸಭಾ ಸುರತ್ಕಲ್ ವಲಯಾಧ್ಯಕ್ಷ ರಸ್ಸೆಲ್ ರೋಚ್ ಸ್ವಾಗತಿಸಿದರು. ಕಥೋಲಿಕ್ ಸಭಾ ಕೇಂದ್ರೀಯ್ ಸಮಿತಿ ಕಾರ್ಯದರ್ಶಿ ನವೀನ್ ಬ್ರ್ಯಾಗ್ಸ್ ವಂದಿಸಿದರು. ಕಥೋಲಿಕ್ ಸಭಾ ಮುಕ್ಕ ಘಟಕ ಕಾರ್ಯದರ್ಶಿ ಪ್ಲೇವಿ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.