By Wilson Pinto

Taccode - Moodbidri, Aug 5 : Under the joint auspices of Vijaya Rural Development Foundation, Mangaluru, Bank of Baroda, Moodbidri Branch, Bharatiya Vikas Trust, Manipal, Holy Cross Church, Taccode and Women's Association, Taccode Unit, the inauguration ceremony of the 5-day saree draping skills training was held at Taccode School Auditorium on 4th August 2025.

ತಾಕೊಡೆ ಯಲ್ಲಿ ಮಹಿಳೆಯರಿಗಾಗಿ 5 ದಿನಗಳ ಕೌಶಲ್ಯ ತರಬೇತಿಯ ಉದ್ಘಾಟನೆ

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಬ್ಯಾಂಕ್ ಒಫ್ ಬರೋಡ ಮೂಡಬಿದ್ರಿ ಶಾಖೆ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಪವಿತ್ರ ಶಿಲುಬೆಯ ದೇವಾಲಯ ತಾಕೊಡೆ ಹಾಗೂ ಸ್ತ್ರೀ ಸಂಘಟನೆ ತಾಕೊಡೆ ಘಟಕ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 04-08-25 ರಿಂದ 08-08-20 ರ ವರೆಗೆ 05 ದಿನಗಳ ಸೀರೆಗೆ ಗೊಂಡೆ ಹಾಕುವ ಕೌಶಲ್ಯ ತರಬೇತಿಯ ಉದ್ಘಾಟನೆ ಸಮಾರಂಭ ತಾಕೊಡೆ ಶಾಲಾ ಸಭಾಂಗಣ ಇಲ್ಲಿ ನಡೆಯಿತು. ಕಾರ್ಯಕ್ರಮ ದ ಮೊದಲಿಗೆ ಮಹಿಳೆಯರು ಪ್ರಾರ್ಥನಾ ಗೀತೆ ಹಾಡಿ ದೇವರ ಅನುಗ್ರಹ ಬೇಡಿದರು.

ನಂತರ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಯೋತಿ ರಾಜ್ ಇವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಹಿಳೆಯರು ತರಬೇತಿಯಿಂದ ಕೌಶಲ್ಯ ಕಲಿತು ಸ್ವಾವಲಂಬನೆ ಜೀವನ ಸಾಗಿಸಲು ಪ್ರಯತ್ನ ಪಡಬೇಕು, ಬ್ಯಾಂಕ್ ಗಳು ಸ್ವ ಉದ್ಯೋಗ ಮಾಡಲು ಸಾಲ ಸೌಲಭ್ಯ ನೀಡುತ್ತದೆ ಎಲ್ಲರೂ ಇದರ ಪ್ರಯೋಜನ ಪಡೆಯಲು ಕರೆ ನೀಡಿದರು.
ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಕಾರ್ಯಕ್ರಮ ವ್ಯವಸ್ತಾಪಕರಾದ ಜೀವನ್ ಕೊಲ್ಯ ಮಹಿಳೆಯರು ಸ್ವ ಉದ್ಯೋಗ ತರಬೇತಿಯ ಪ್ರಯೋಜನ ಪಡೆದು ಸಣ್ಣ ಸಣ್ಣ ಉದ್ದಿಮೆ ಪ್ರಾರಂಭ ಮಾಡಿ ಉಳಿತಾಯ ಮಾಡಿ ಯಶಸ್ಸು ಗಳಿಸಲು ಕರೆ ನೀಡಿದರು.

ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ ತಾಕೊಡೆ ದೇವಾಲಯದ ಧರ್ಮ ಗುರುಗಳಾದ ಫಾ|ರೋಹನ್ ಲೋಬೊ ಇವರು ಮಾತಾಡುತ್ತಾ ಸ್ವ-ಉದ್ಯೋಗ ತರಬೇತಿ ಯಿಂದ ಮಹಿಳೆಯರು ಉತ್ತಮ ಜೀವನ ನಡೆಸಲು ಸಾಧ್ಯವಿದೆ, ಇಂಥ ತರಬೇತಿ ಗಳಿಗೆ ನಮ್ಮ ಸದಾ ಬೆಂಬಲವಿದೆ ಎಂದು ತಿಳಿಸಿ ತರಬೇತಿ ಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಶುಭ ಕೋರಿದರು.

ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಯಾದ ಆಲ್ವಿನ್ ಪಿಂಟೋ, ಆಯೋಗ ಸಂಯೋಜಕರಾದ ಪಾವ್ಲ್ ಡಿಸೋಜಾ, ಬೆಥೆನಿ ಕಾನ್ವೆಂಟ್ ಸುಪೇರಿಯರ್ ಸಿಸ್ಟೆರ್ ರೀನಾ, ತರಬೇತುದಾರರಾದ ಶುಭ ಲಕ್ಷ್ಮೀ ಮೂಡ ಬಿದಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ತ್ರೀ ಸಂಘಟನೆ ಅಧ್ಯಕ್ಷರಾದ ಐವಿ ಕ್ರಾಸ್ತ ಸ್ವಾಗತಿಸಿ, ಸಹ ಕಾರ್ಯದರ್ಶಿ ಶೆರಿ ನಜೆರೆತ್ ಧನ್ಯವಾದಗೈದರು, ಲೀಜಾ ರೋಡ್ರಿ ಗಸ್ ಕಾರ್ಯಕ್ರಮ ನಿರೂಪಿಸಿ ದರು. 30 ಜನ ಮಹಿಳೆಯರು 5 ದಿನದ ತರಬೇತಿ ಯಲ್ಲಿ ಭಾಗವಹಿಸುತ್ತಿದ್ದಾರೆ.

Tags:

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.