Media Release

Mangaluru, May 29, 2025 : The newly elected office bearers of Catholic Sabha Mangalore Pradesh (R) for the year 2025-26, met with Most Rev. Dr. Peter Paul Saldanha, the Bishop of the Diocese of Mangalore and also the patron of the organisation, and discussed the annual work plans for the current year.

ಕಥೊಲಿಕ್ ಸಭಾ ಮಂಗ್ಳುರ್ ಪ್ರದೆಶ್(ರಿ) ಸಂಘಟನೆಯಿಂದ ಮಂಗಳೂರು ಧರ್ಮಾಧ್ಯಕ್ಷರ ಭೇಟಿ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೆಶ್(ರಿ) ಸಂಘಟನೆಗೆ 2025-26 ನೇ ವರ್ಷಕ್ಕೆ ಹೊಸದಾಗಿ ಚುನಾಯಿತರಾದ ಪದಾಧಿಕಾರಿಗಳು, ಸದ್ರಿ ಸಂಘಟನೆಯ ಪೋಷಕರಾಗಿರುವ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿರುವ ಅತೀ ವಂದನೀಯ ಡಾ|ಪೀಟರ್ ಪಾವ್ಲ್ ಸಲ್ಡನ್ಹಾರವರನ್ನು ದಿನಾಂಕ 29/05/2025 ರಂದು ಭೇಟಿ ಮಾಡಿ ಸದ್ರಿ ವರ್ಷದ ವಾರ್ಷಿಕ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಸಿದರು.

ತದನಂತರ ವಿಗಾರ್ ಜೆರಾಲ್ ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೋನ್ಹಾ, ಕಥೊಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಡಾ|ಜೆ.ಬಿ.ಸಲ್ಡಾನ್ಹಾ, ಚಾನ್ಸಲರ್ ವಂದನೀಯ ಫಾ|ವಿಕ್ಟರ್ ಡಿಸೋಜಾ, ಪ್ರೊಕ್ಯೂರೇಟರ್ ವಂದನೀಯ ಫಾ|ಜಗದೀಶ್ ಪಿಂಟೊ, ಎಸ್ಟೇಟ್ ಮೇನೇಜರ್ ವಂದನೀಯ ಫಾ|ಮ್ಯಾಕ್ಸಿಮ್ ರೊಸಾರಿಯೋ ಮತ್ತು ರಾಕ್ಣೊ ಸಂಪಾದಕರಾಗಿರುವ ವಂದನೀಯ ಫಾ|ರೂಪೇಶ್ ಮಾಡ್ತಾ ಇವರನ್ನು ಭೇಟಿ ಮಾಡಿ ಆಶೀರ್ವಾದವನ್ನು ಪಡೆದರು ಹಾಗೂ ಮುಂದಿನ ಯೋಜನೆಗಳಿಗೆ ಸಹಕಾರ ಕೇಳಿದರು. ಇವರೆಲ್ಲರೂ ತಮ್ಮ ಆಶೀರ್ವಾದವನ್ನು ನೀಡಿ ಕಳೆದ 46 ವರ್ಷಗಳಿಂದ ಸೇವೆಯ ಕೆಲಸಗಳನ್ನು ಮಾಡುತ್ತಾ ಬಂದಿರುವಿರಿ ಎಂದು ಹಾರೈಸಿ ಮುಂದಿನ ಯೋಜನೆಗಳಿಗೆ ಶುಭವನ್ನು ಕೋರಿದರು. ಹಾಗೂ ನಿಮ್ಮ ಮುಂದಾಳುತ್ವದಲ್ಲಿ ಕಥೊಲಿಕ್ ಸಭೆಯ ಕೀರ್ತಿ ಇನ್ನಷ್ಟು ಮೇಲ್ದರ್ಜೆಗೆ ಏರಲಿ ಎಂದು ಸಹಕಾರದ ಭರವಸೆಯನ್ನು ಕೊಟ್ಟರು.

ಉಪಸ್ಥಿತಿ :
ಆಧ್ಯಾತ್ಮಿಕ ನಿರ್ದೇಶಕರು: ವಂ|ಡಾ|ಜೆ.ಬಿ.ಸಲ್ಡಾನ್ಹಾ
ಅಧ್ಯಕ್ಷರು: ಶ್ರೀ ಸಂತೋಷ್ ಡಿಸೋಜಾ, ಬಜ್ಪೆ
ಉಪಾಧ್ಯಕ್ಷರು-1: ಶ್ರೀ ಲಾರೆನ್ಸ್ ಡಿಸೋಜಾ, ಸುರತ್ಕಲ್
ಉಪಾಧ್ಯಕ್ಷರು-2: ಶ್ರೀ ಲಿಯೋ ರೊಡ್ರಿಗಸ್, ಮಡಂತ್ಯಾರು
ಪ್ರಧಾನ ಕಾರ‍್ಯದರ್ಶಿ: ಶ್ರೀಮತಿ ವಿಲ್ಮಾ ಮೊಂತೇರೊ, ದೆರೆಬೈಲ್
ಸಹ ಕಾರ‍್ಯದರ್ಶಿ: ಶ್ರೀ ಓಲ್ವಿನ್ ರೊಡ್ರಿಗಸ್, ಆಲಂಗಾರು
ಖಜಾಂಜಿ: ಶ್ರೀ ಫ್ರಾನ್ಸಿಸ್ ಮೊಂತೇರೊ, ಮರಿಯಾಶ್ರಮ್, ತಲಪಾಡಿ
ಸಹಖಜಾಂಚಿ: ಶ್ರೀಮತಿ ಲವೀನಾ ಗ್ರೆಟ್ಟಾ ಡಿಸೋಜಾ
ನಿಕಟ ಪೂರ್ವ ಅಧ್ಯಕ್ಷರು: ಓಲ್ವಿನ್ ಡಿಸೋಜಾ, ಪಾನೀರ್

Tags:

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.