Media Release

Belthangady, Aug 11, 2020 : Holy Redeemer English Medium School here scored 100% results for the 5th consecutive year in the 2019-20 SSLC exams held recently.


ಬೆಳ್ತಂಗಡಿ : ಸತತ 5 ನೇ ಬಾರಿಗೆ ಶೇಕಡಾ 100 ಫಲಿತಾಂಶ ಪಡೆದ ಹೋಲಿ ರಿಡೀಮರ್ ಶಾಲೆ

ಬೆಳ್ತಂಗಡಿ : 2019- 20 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಯಲ್ಲಿ ಇಲ್ಲಿನ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯು ಸತತ 5 ನೇ ಬಾರಿಗೆ 100 ಶೇಕಡಾ ಫಲಿತಾಂಶವನ್ನು ಪಡೆದಿದೆ. ವಿದ್ಯಾರ್ಥಿಗಳಾದ ಅವನಿ ಹೆಗ್ಡೆ 593 ಅಂಕ ಪಡೆದು ಪ್ರಥಮ ಸ್ಥಾನ, ಜೋಯಲ್ ಮಸ್ಕರೇನಸ್ 592 ಅಂಕ ಪಡೆದು ದ್ವಿತೀಯ ಸ್ಥಾನ ಮತ್ತು ಪ್ರಿನ್ಸಿಟಾ ಡಿ'ಸೋಜ 590 ಅಂಕದೊಂದಿಗೆ ತೃತಿಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಒಟ್ಟು 12 ಉನ್ನತ ಶ್ರೇಣಿ, 27 ಪ್ರಥಮ ಶ್ರೇಣಿ , 4 ದ್ವಿತೀಯ ಶ್ರೇಣಿ ಪಡೆದು ವಿದ್ಯಾರ್ಥಿಗಳು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.

 

ಶಾಲೆಯ ಘನತೆಯನ್ನು ಹೆಚ್ಚಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದವನ್ನು ಶಾಲೆಯ ನೂತನ ಸಂಚಾಲಕರಾದ ಅತಿ ವಂದನೀಯ ಫಾ. ಜೋಸೆಫ್ ಅಲ್ಫೋನ್ಸ್ ಕಾರ್ಡೋಜಾ , ಶಾಲಾ ಮುಖ್ಯೋಪಾಧ್ಯಾಯರಾದ ವಂ.ಫಾ.ಜೇಸನ್ ಮೋನಿಸ್ , ಶಿಕ್ಷಕ - ರಕ್ಷಕ ಸಂಘದ ಸದಸ್ಯರು ಹಾಗೂ ಪೋಷಕರು ಅಭಿನಂದಿಸಿದರು.

 

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.