Media Release
Mangaluru , July 2 : Karnataka Konkani Sahitya Academy has organized a poetry gathering titled 'Kavyam Vhalo-4' on July 05, 2025 at the Academy auditorium.
ʼಕಾವ್ಯಾಂ ವ್ಹಾಳೊ-4ʼ ಕೊಂಕಣಿ ಕವಿಗೋಷ್ಟಿ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ಜುಲೈ 05, 2025ರಂದು ʼಕಾವ್ಯಾಂ ವ್ಹಾಳೊ-4ʼ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಹಮ್ಮಿಕೊಂಡಿದೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಿರಿಯ ಬರಹಗಾರರಾದ ಶ್ರೀ ಎಡ್ವಿನ್ ನೆಟ್ಟೊ (ಎಡಿ ನೆಟ್ಟೊ)ರವರನ್ನು ಸನ್ಮಾನಿಸಲಾಗುವುದು. ಶ್ರೀ ಅರುಣ್ ಜಿ. ಶೇಟ್ರವರು ಮುಖ್ಯ ಅತಿಥಿಯಾಗಿ, ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀ ವೆಂಕಟೇಶ್ ನಾಯಕ್ರವರು ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ಶ್ರೀಮತಿ ಫೆಲ್ಸಿ ಲೋಬೊ, ದೆರೆಬೈಲ್ ಇವರು ಈ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಲಿರುವರು. ಶ್ರೀಮತಿ ಜೋಯ್ಸ್ ಕಿನ್ನಿಗೋಳಿ, ಶ್ರೀ ಹೆನ್ರಿ ಮಸ್ಕರೇನ್ಹಸ್, ಶ್ರೀ ಎಡ್ವರ್ಡ್ ಲೋಬೊ, ಶ್ರೀ ಲಾರೆನ್ಸ್ ಬ್ಯಾಪ್ಟಿಸ್ಟ್, ಶ್ರೀಮತಿ ಜೂಲಿಯೆಟ್ ಫೆರ್ನಾಂಡಿಸ್, ಶ್ರೀ ರಾಬರ್ಟ್ ಡಿಸೋಜ, ಶ್ರೀ ವಾಸುದೇವ ಶ್ಯಾನ್ಭಾಗ್, ಶ್ರೀಮತಿ ಕುಸುಮಾ ಕಾಮತ್, ಶ್ರೀ ಮೆಲ್ವಿನ್ ವಾಸ್ ನೀರ್ಮಾರ್ಗ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸುವರು.
ಕೊಂಕಣಿ ಭಾಂದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.



.png)
.png)
.png)