Media Release

Mangaluru, June 7 : Karnataka Konkani Sahitya Academy organized a poetry gathering titled 'Kavyam Vahalo-3' on June 06, 2025 at the Academy auditorium.

'ಕಾವ್ಯಾಂ ವ್ಹಾಳೊ-3' ಕೊಂಕಣಿ ಕವಿಗೋಷ್ಟಿ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ಜೂನ್ 06, 2025ರಂದು ʼಕಾವ್ಯಾಂ ವ್ಹಾಳೊ-3ʼ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಹಮ್ಮಿಕೊಂಡಿತ್ತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿ, ನೆರೆದಿರುವ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಮತ್ತು ಕವಿಗಳಾದ ಶ್ರೀ ನವೀನ್ ಕುಲ್ಶೇಕರ್ರವರನ್ನು ಸನ್ಮಾನಿಸಲಾಯಿತು. ಅವರು ಮಾತಾನಾಡಿ, ಎಲ್ಲರನ್ನೂ ಹೃದಳಾಂತರದಿಂದ ಧನ್ಯವಾದ ಸಮರ್ಪಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಸಾಹುಕಾರ್ ಕಿರಣ್ ಪೈರವರು ಸನ್ಮಾನಿತರನ್ನು ಸನ್ಮಾನಿಸಿ, ಕೊಂಕಣಿಗರು, ವಿದ್ಯಾಭ್ಯಾಸದಲ್ಲಿ ಹಾಗೂ ಇತರೆ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತ್ತಾ ಇದ್ದಾರೆ. ಕೊಂಕಣಿ ಅಕಾಡೆಮಿಯು ಕವಿಗೋಷ್ಟಿ ಕಾರ್ಯಕ್ರಮವನ್ನು ಏರ್ಪಡಿಸಿ, ಕವಿಗಳಿಗೆ ಕವಿತೆಗಳನ್ನು ಸೃಷ್ಟಿಸಲು, ಹೊಸ ಹುಮ್ಮಸ್ಸನ್ನು ನೀಡಿದೆ. ಈ ಕಾರ್ಯಕ್ರಮವು ಹೀಗೆಯೇ ಮುಂದುವರಿದು ಹೋಗಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಮುಖ ಭಾಷಣಕಾರರಾಗಿ ಖ್ಯಾತ ಕವಿ ಶ್ರೀ ಟೈಟಸ್ ನೊರೊನ್ಹಾರವರು ಕವಿತೆಗಳ ಇತಿಹಾಸ, ಹಿರಿಯ ಕವಿಗಳ ಬಗ್ಗೆ ಮಾಹಿತಿಯನ್ನು ಒದಗಿಸಿ ಉಪನ್ಯಾಸವನ್ನು ನೀಡಿದರು.

ಡಾ. ಪ್ಲಾವಿಯಾ ಕ್ಯಾಸ್ತೆಲಿನೊರವರು ಕವಿಗೋಷ್ಟಿಯನ್ನು ನಡೆಸಿದರು. ಶ್ರೀ ಮ್ಯಾಕ್ಸಿಂ ಲುದ್ರಿಗ್, ಶ್ರೀಮತಿ ಸುಮಾ ವಸಂತ್, ಶ್ರೀ ಜೋರ್ಜ್ ಲಿಗೊರಿ, ಶ್ರೀ ಲೋಯ್ಡ್ ರೇಗೊ, ಶ್ರೀ ಅರವಿಂದ ಶ್ಯಾನಭಾಗ್, ಕು. ಚೆಲ್ಸಿಯಾ ಪರ್ಲ್ ಕ್ಯಾಸ್ತೆಲಿನೊ, ಶ್ರೀಮತಿ ಸ್ಮಿತಾ ಶೆಣೈ, ಶ್ರೀ ರೋಶನ್ ಕ್ರಾಸ್ತಾ, ಶ್ರೀಮತಿ ಐರಿನ್ ರೆಬೆಲ್ಲೊ, ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸಿದರು.

ಅಕಾಡೆಮಿ ಸದಸ್ಯರಾದ ಶ್ರೀ ದಯಾನಂದ ಮಡ್ಕೇಕರ್‌ರವರು ಧನ್ಯವಾದ ಸಮರ್ಪಿಸಿದರು. ಅಕಾಡೆಮಿ ಸದಸ್ಯರಾದ ಶ್ರೀ ನವೀನ್‌ ಲೋಬೊ, ಶ್ರೀ ಸಮರ್ಥ್‌ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ಶ್ರೀಮತಿ ಸಪ್ನಾ ಮೇ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿದರು.

Tags:

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.