Media Release

Mangaluru, June 4 : The 39th Poetica Poetry Festival was held at St. Anthony's Church, Antonikatte, Bajpe on Monday, June 1st.

ಪೋಯೆಟಿಕಾದ 39ನೇ ಕವಿಗೋಷ್ಠಿ

ಪೋಯೆಟಿಕಾದ 39ನೇ ಕವಿಗೋಷ್ಠಿ ಸೈಂಟ್ ಆಂತೋನಿ ಚರ್ಚ್, ಆಂತೋನಿಕಟ್ಟೆ, ಬಜ್ಪೆಯಲ್ಲಿ ಬಾನುವಾರ ಜೂನ್ 1 ರಂದು ನಡೆಯಿತು.
ಈ ಕವಿಗೋಷ್ಠಿಯಲ್ಲಿ ಕರಾವಳಿ ಕರ್ನಾಟಕ ಹಾಗೂ ಗೋವಾದಿಂದ ಹಲವಾರು ಕೊಂಕಣಿ ಕವಿಗಳು ಭಾಗವಹಿಸಿದ್ದರು. 125ಕ್ಕೂ ಹೆಚ್ಚು ಸ್ವರಚಿತ ಕವಿತೆಗಳನ್ನು ಓದಿ, ಕೊಂಕಣಿ ಸಾಹಿತ್ಯದ ಸಮೃದ್ಧತೆಯಿಂದ ರಸಿಕರನ್ನು ರಂಜಿಸಿದರು.

ಈ ಕಾರ್ಯಕ್ರಮವನ್ನು ದೆನಿಸ್ ಡಿಸಿಲ್ವಾ ರವರ ಅಧ್ಯಕ್ಷತೆಯ 'ಅಮಿ ಅನೀ ಆಮ್ಚಿ' ಎಂಬ ಸಾಂಸ್ಕ್ರತಿಕ ಸಂಘ ಆಯೋಜಿಸಿತ್ತು. ಇತ್ತೀಚೆಗೆ ಮಂಗಳೂರಿನ ಕೆಲರಾಯಿ ಯಲ್ಲಿ ನಡೆದ 'ಪೆಪೆರೆಪೆಪೆಡುಂ' ಎಂಬ ಬ್ರಾಸ್ ಬ್ಯಾಂಡ್ ಹಬ್ಬವನ್ನೂ ಇದೇ ಪ್ರಖ್ಯಾತ ತಂಡ ಆಯೋಜಿಸಿತ್ತು.

ಉಧ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸೈಂಟ್ ಆಂತೊನಿ ಚರ್ಚ್ ನ ಧರ್ಮಗುರುಗಳಾದ ವಂ|ಫಾ|ಫ್ರಾನ್ಸಿಸ್ ರವರು 'ಪೊಯೆಟಿಕಾ' ಮತ್ತು 'ಆಮಿ ಆನಿ ಆಮ್ಚಿಂ' ಸಂಘಟನೆಗಳ ಸಾಹಿತಿಕ ಹಾಗೂ ಸಾಮಾಜಿಕ ಕಾರ್ಯಗಳ ಬಗ್ಗೆ ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಬಂದ ಬಜ್ಪೆಯ ಸಂತೋಶ್ ಡಿಸೋಜರವರು ಸರಕಾರ ಮಾಡಬೇಕಾಗಿದ್ದ ಸಾಹಿತಿಕ ಕಾರ್ಯಗಳನ್ನು ತಾವಾಗಿ ಆಯೋಜಿಸುತ್ತಿರುವ ಪೊಯೆಟಿಕಾ ಕವಿಗಳನ್ನು ಪ್ರಶಂಸಿಸಿದರು.
'ಅಮಿ ಅನೀ ಆಮ್ಚಿ' ಅಧ್ಯಕ್ಷರಾದ ಡೆನಿಸ್ ಡಿಸಿಲ್ವಾ, ಕಾರ್ಯದರ್ಶಿ ಸಂತೋಷ್ ಡಿಕೋಸ್ಟ, ಹಾಗೂ ಪೊಯೆಟಿಕ ಮುಖ್ಯಸ್ಥರಾದ ನವೀನ್ ಪಿರೇರಾ, ಸುರತ್ಕಲ್ ವೇದಿಕೆಯಲ್ಲಿ ಹಾಜರಿದ್ದರು.

ಪ್ರಸಿದ್ದ ಕೊಂಕಣಿ ಕವಿಗಳಾದ ಜಾರ್ಜ್ ಲಿಗೋರಿ ಡಿಸೋಜ, ಸುರತ್ಕಲ್ ಮತ್ತು ಲೋಯ್ಡ್ ರೇಗೊ, ತಾಕೊಡೆ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ನವೀನ್ ಪಿರೇರಾ ಸುರತ್ಕಲ್, ಜೊಸ್ಸಿ ಪಿಂಟೊ ಕಿನ್ನಿಗೋಳಿ, ಗ್ವಾದಲೂಪ್ ಡಾಯಸ್ ಗೋವಾ, ರೋಷನ್ ಕ್ಯಾಸ್ಟೆಲಿನೋ ಪಾಲಡ್ಕ, ಫಾ. ಫ್ರಾನ್ಸಿಸ್ ರೊಡ್ರಿಗಸ್ ಆಂತೊನಿಕಟ್ಟೆ, ಎಡಿ ಕಾರ್ಡೋಜಾ ತಾಕೊಡೆ, ಮಚ್ಚಾ ಮಿಲಾರ್, ಮರಿಯಾ ಪಿಂಟೊ ಕುಲಶೇಕರ, ಮ್ಯಾಕ್ಸಿಂ ರೊಡ್ರಿಗಸ್ ಬೊಂದೆಲ್, ಸರಸ್ವತಿ ನಾಯ್ಕ್ ಗೋವಾ, ಗಾಡ್ವಿನ್ ಪಿಂಟೊ ಬಿಜೈ, ರೇಮಂಡ್ ಡ್ಡಿಕುನ್ನ ತಾಕೊಡೆ, ರಿಚ್ಚಿ ಪಿರೇರಾ ದೆರೆಬೈಲ್, ಸ್ಟೇನಿಸ್ಲಾವ್ಸ್ ಡಿಸೋಜಾ ಕಿರೆಂ, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ಪೆದ್ರು ಪ್ರಭು ತಾಕೊಡೆ, ಲವಿ ಗಂಜಿಮಠ, ಹೆನ್ರಿ ಮಸ್ಕರೆನಸ್ ಗಂಜಿಮಠ, ಲ್ಯಾನ್ಸಿ ಸಿಕ್ವೇರಾ ಸುರತ್ಕಲ್, ರೆಮಿ ಕಾಟಿಪಳ್ಳ, ಲಾರೆನ್ಸ್ ಡಿಸೋಜ ಸುರತ್ಕಲ್ ಕವಿತಾ ವಾಚನ ಮಾಡಿದರು.

ಮಡಂತ್ಯಾರ್ ದಿಂದ ಬಂದ 'ರಂಗ್ತರಂಗ್' ಕಲಾತಂಡ ದವರು ಕೊಂಕಣಿ ಸಾಂಸ್ಕೃತಿಕ ಹಾಡುಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದರು.

ಸಮಾರೋಪ ಕಾರ್ಯಕ್ರಮದಲ್ಲಿ ಸಮಾಜ ಸೇವಕ ರೊಲ್ಫಿ ಡಿಕೋಸ್ತಾ ಮೂಲ್ಕಿ ಮತ್ತು ಲಾರೆನ್ಸ್ ಡಿಸೋಜ ಸುರತ್ಕಲ್ ಎಲ್ಲಾ ಕವಿಗಳಿಗೆ ಮತ್ತು ಕಲಾವಿದರಿಗೆ ಸ್ಮರಣಿಕೆಗಳನ್ನು ವಿತರಿಸಿದರು.
ಪೊಯೆಟಿಕಾ ಅಧ್ಯಕ್ಷರಾದ ನವೀನ್ ಪಿರೇರಾ ಸುರತ್ಕಲ್ ಧನ್ಯವಾದ ಸಮರ್ಪಿಸಿದರು.

ಸಂಭ್ರಮದ ಭೋಜನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

Tags:

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.