Media Release
Mangaluru, May 3 : Karnataka Konkani Sahitya Academy organized a poetry gathering titled 'Kavyam Vahalo-2' on May 03, 2025 at the Academy auditorium.
ʼಕಾವ್ಯಾಂ ವ್ಹಾಳೊ-2ʼ ಕೊಂಕಣಿ ಕವಿಗೋಷ್ಟಿ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ಮೇ 03, 2025ರಂದು ʼಕಾವ್ಯಾಂ ವ್ಹಾಳೊ-2ʼ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಹಮ್ಮಿಕೊಂಡಿತ್ತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿ, ನೆರೆದಿರುವ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಲೇಖಕಿ ಮತ್ತು ಕೊಂಕಣಿ ಕಾರ್ಯಕರ್ತರಾದ ಶ್ರೀಮತಿ ಮರೋಳಿ ಸಬೀತಾ ಕಾಮತ್ರವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಶಿಕ್ಷಕ ಹಾಗೂ ಕೊಂಕಣಿ ಕಾರ್ಯಕರ್ತರಾದ ಶ್ರೀ ಬಿ.ಪುಂಡಲೀಕ ಮರಾಠೆ, ಶಿರ್ವಾರವರು ಸನ್ಮಾನಿತರನ್ನು ಸನ್ಮಾನಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಮುಖ ಭಾಷಣಕಾರರಾಗಿ ಖ್ಯಾತ ಕವಿ ಶ್ರೀ ಆ್ಯಂಡ್ರು ಎಲ್ ಡಿಕುನ್ಹಾರವರು ಕವಿತೆಗಳ ಬಗ್ಗೆ ಉಪನ್ಯಾಸವನ್ನು ನೀಡಿದರು.
.jpg)
.jpg)
.jpg)
.jpg)
.jpg)

ಶ್ರೀ ವಿಲ್ಪ್ರೆಡ್ ಲೋಬೊರವರು ಕವಿಗೋಷ್ಟಿಯನ್ನು ನಡೆಸಿದರು. ಶ್ರೀ ಸ್ಟೀವನ್ ಕ್ವಾಡ್ರಸ್, ಕು. ರಾಧಿಕಾ ಪೈ, ಶ್ರೀಮತಿ ಪ್ರಭಾ ರೇಗೊ, ಶ್ರೀ ರೇಮಂಡ್ ಡಿಕುನ್ಹಾ, ಶ್ರೀ ವಿನ್ಸೆಂಟ್ ಪಿಂಟೊ, ಅಂಜೆಲೊರ್, ಶ್ರೀಮತಿ ಕೃತಿಕಾ ಕಾಮತ್, ಶ್ರೀ ರೊನ್ ಮಾಯ್ಕಲ್ ವಾಸ್, ಶ್ರೀಮತಿ ಜಯಶ್ರೀ ಶೆಣೈ, ಶ್ರೀ ಆಲ್ವಿನ್ ದಾಂತಿ, ಶ್ರೀ ಸ್ಲ್ಯಾನಿಸ್ಲವ್ಸ್ ಡಿಸೋಜ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸಿದರು.
ಅಕಾಡೆಮಿ ಸದಸ್ಯರಾದ ಶ್ರೀ ಸಮರ್ಥ್ ಭಟ್ ರವರು ಧನ್ಯವಾದ ಸಮರ್ಪಿಸಿದರು. ಅಕಾಡೆಮಿ ಸದಸ್ಯರಾದ ಶ್ರೀ ನವೀನ್ ಲೋಬೊರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


.png)
.png)
.png)