Media Release
Mangaluru, Aug 5, 2024 : St Christopher Association held 58th Annual Celebration at Rosario Cathedral, Mangalore with mass and a get-together on August 4.
ಸಾಂ ಕ್ರಿಸ್ತೋಫರ್ ಎಸೋಸಿಯೇಶನ್ ಇದರ 58ನೇ ವಾರ್ಷಿಕ ಮಹೋತ್ಸವ
ಸಾಂ ಕ್ರೀಸ್ತೋಫರ್ ಎಸೋಸಿಯೇಶನ ಚಾಲಕ ಮ್ಹಾಲಕರ ಸಂಘದ ಇದರ 58ನೇ ವಾರ್ಷಿಕ ಮಹೋತ್ಸವವು ಮಂಗಳೂರು ರೋಜಾರಿಯೋ ಕ್ಯಾಥೆಡ್ರಲ್‍ನಲ್ಲಿ ಜರುಗಿತು. ವಂದನೀಯ ಧರ್ಮಗುರು ಲಿಯೊ ಲಸ್ರಾದೊರವರು ಬಲಿಪೂಜೆಯನ್ನು ಅರ್ಪಿಸಿ ವಾಹನಗಳ ಮೇಲೆ ಆಶೀರ್ವಾದ ನೀಡಿದರು. ವಂದನೀಯ ಧರ್ಮಗುರು ವಿನೋದ್ ಲೋಬೊ ಬಲಿಪೂಜೆಯಲ್ಲಿ ಪಾಲ್ಗೊಂಡರು.
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಜೋನ್ ಎಡ್ವರ್ಡ್ ಡಿಸಿಲ್ವಾ ವಹಿಸಿ ವಿಧಾನ ಪರಿಷತ್ತಿನ ಸದಸ್ಯರಾಗಿ ದ್ವಿತೀಯ ಬಾರಿ ಆಯ್ಕೆಯಾದ ಸನ್ಮಾನ್ಯ ಶ್ರೀ ಐವನ್ ಡಿಸೋಜಾ ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀಮಾನ್ ಜೋಕಿಮ್ ಸ್ಟ್ಯಾನಿ ಅಳ್ವಾರಿಸ್‍ರವರಿಗೆ ಸನ್ಮಾನಿಸಲಾಯಿತು. ಸನ್ಮಾನ ಪಡೆದ ಇವರು ಕಾರ್ಯಕ್ರಮಕ್ಕೆ ಶುಭ ನುಡಿದರು.
ವಂದನೀಯ ಧರ್ಮಗುರು ಆಲ್ಪ್ರೆಡ್ ಜೆ. ಪಿಂಟೊ (ನಿರ್ದೇಶಕರು ಸಾಂ ಕ್ರೀಸ್ತೋಫರ್ ಎಸೋಸಿಯೇಶನ್) , ಶ್ರೀಮಾನ್ ವಿಕ್ಟರ್ ಜೋಸೆಫ್ ಮಿನೇಜಸ್ (ಗೌರವ ಅಧ್ಯಕ್ಷರು) , ಶ್ರೀಮಾನ್ ಜೆರಾಲ್ಡ್ ಡಿಸೋಜ (ಸಹಕಾರ್ಯಾದರ್ಶಿ) ವೇದಿಕೆಯು ಉಪಸ್ಥಿತರಿದ್ದರು. ಶ್ರೀಮಾನ್ ಸುನಿಲ್ ಪೀಟರ್ ಪಾವ್ಲ್ ಲೋಬೊ (ಕಾರ್ಯದರ್ಶಿ) ವಾರ್ಷಿಕ ವರದಿ ಮಂಡಿಸಿದರು. ಶ್ರೀಮಾನ್ ಜೋನ್ ಬ್ಯಾಪ್ಟಿಸ್ಟ್ ಗೋಮ್ಸ್ (ಉಪಧ್ಯಕ್ಷರು) ವಾರ್ಷಿಕ ಲೆಕ್ಕಚಾರವನ್ನು ಸಭೆಯಲ್ಲಿ ಇಟ್ಟರು. ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಸ್ಕೋಲರ್‍ಶಿಪ್ ಮತ್ತು ಪ್ರತಿಭ ಪುರಸ್ಕಾರ ನೀಡಲಾಯಿತು. ಮುಂದಿನ ವರ್ಷಕ್ಕೆ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಶ್ರೀಮಾನ್ ನೈಜಿಲ್ ಪಿರೇರಾರವರು ಕಾರ್ಯ ನಿರ್ವಹಿಸಿದರು.