By Fr Vinay Kumar

Chikamagalur, Oct 2 : St. Vincent de Paul Society Day was celebrated at St. Joseph's Cathedral here on 26th September 2021.


ಚಿಕ್ಕಮಗಳೂರು ಪ್ರಧಾನಾಲಯದಲ್ಲಿ ಸಂತ ವಿನ್ಸೆಂಟ್ ದೆ ಪೌಲರ ಸಭೆಯ ದಿನದ ಆಚರಣೆ

ಚಿಕ್ಕಮಗಳೂರು ಪ್ರಧಾನಾಲಯದಲ್ಲಿ 26-9-21 ರಂದು ಸಂತ ವಿನ್ಸೆಂಟ್ ದೆ ಪೌಲರ ಸಭೆಯ ದಿನವನ್ನು ಆಚರಿಸಲಾಯಿತು.‌ ಸಭೆಯ ಸದಸ್ಯರು ಪೂಜೆಯ ಪ್ರಾರಂಭದಲ್ಲಿ ಗುರುಗಳೊಂದಿಗೆ ಬಂದು ಪೀಠದ ಸುತ್ತ ನಿಂತು ದೀಪ ಬೆಳಗುವುದರ ಮೂಲಕ ಆಚರಣೆಗೆ ಚಾಲನೆಯನ್ನು ನೀಡಿದರು. ದಿವ್ಯ ಬಲಿಪೂಜೆಯನ್ನು ಪ್ರದಾನಾಲಯದ ಪ್ರಧಾನ ಗುರುಗಳಾದ ವಂ. ಸ್ವಾಮಿ ಅಂತೋಣಿ ಪಿಂಟೋ ರವರು ಅರ್ಪಿಸಿದರು. ಹೃದಯ ಸ್ಪರ್ಶಿ ಪ್ರಬೋಧನೆಯನ್ನು ಪ್ರಧಾನಾಲಯದ ಸಹಾಯಕ ಗುರುಗಳಾಗಿರುವ ವಂ. ಸ್ವಾಮಿ ವಿನಯ್ ಕುಮಾರ್ ರವರು ನೀಡಿ ಸದಸ್ಯರ ಕರ್ತವ್ಯದ ಬಗ್ಗೆ ತಿಳಿಸಿದರು. ಸರ್ವ ಸದಸ್ಯರು ಪೀಠದ ಮುಂದೆ ನಿಂತು ಸ್ವಾಮಿ ಅಂತೋಣಿ ಪಿಂಟೋ ರವರಿಂದ ಅಧಿಕಾರ ಸ್ವೀಕಾರವನ್ನು ಮಾಡಿದರು. ಬಲಿಪೂಜೆಯ ಬಳಿಕ ಫಲಾನುಭವಿಗಳಿಗೆ ಸಿಹಿಯನ್ನು ಹಂಚಲಾಯಿತು.

Tags:

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.