Media Release
Pics : Stanly Bantwal

Mangaluru, Nov 4 : Catholic Sabha Mangaluru Pradesh (R.) honoured its patron and the new bishop of Mangaluru Diocese Dr. Peter Paul Saldanha in a programme at bishop's house , Kodialbail here on November 4, 2018.

The new bishop was accorded a traditional welcome to the tune of gumta songs and taken to the pogramme hall in a procession. All were welcomed through a melodious welcome song composed by Anil Patrao.

The prominent laity leaders honoured on this occasion were senior journalist and KPSC member Dr Ronald Anil Fernandes and new chairman of MCC bank Anil Lobo. The religious leaders honoured were the new Vical General of Mangaluru Diocese Msgr Lawrence Maxim Noronha and outgoing Vical General Msgr Denis Moras Prabhu.

Bishop Peter Paul Saldanha lauded the selfless service of Catholic Sabha and at the same time highlighted emergence of community youth in government service.

Catholic Sabha Mangaluru Pradesh Spritual Director Rev Fr Mathew Vas, President Rolphy D'Costa , General Secretary Celestine D'Souza , Catholic Sabha Udupi Pradesh Spritual Director Rev Fr Ferdinand Gonsalves and President Mr Alwyn Quadros were present on the dais.

Catholic Sabha Vice-President David D'Souza welcomed the gathering. Celine Rodrigues and Francis DCunha compered the programme. CS President Designate Stany Lobo rendered vote of thanks.


ಕಥೊಲಿಕ್ ಸಭಾ ಮಂಗಳೂರು ಧರ್ಮಪ್ರಾಂತ್ಯ

ಜಾತಿ, ಮತ, ಭೇದ ಮರೆತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮಾನವಿಯತೆ ಮೆರೆಯಲು ಬಿಷಪ್ ವಂ|ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ

ದಿನಾಂಕ 04-11-2018ರಂದು ಪೂರ್ವಾಹ್ನ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮವನ್ನು ಕೆಥೊಲಿಕ್ ಸಭಾ ವತಿಯಿಂದ ಮಂಗಳೂರಿನ ಧರ್ಮಾಧ್ಯಕ್ಷರ ನಿವಾಸದ ಸಭಾಂಗಣದಲ್ಲಿ ಜರುಗಿತು. ಕೆಥೊಲಿಕ್ ಸಭಾ ಅಧ್ಯಕ್ಷರಾದ ಶ್ರೀ ರೋಲ್ಫಿ ಡಿ’ಕೋಸ್ತಾರವರು ಅಭಿನಂದನಾ ಮಾತುಗಳನ್ನಾಡಿ ಫಲಪುಷ್ಪ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಧರ್ಮಕ್ಷೇತ್ರದ ನೂತನ ಶ್ರೇಷ್ಠಗುರುಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಶ್ರೇಷ್ಠಗುರುಗಳಾದ ವಂದನೀಯ ಡೆನಿಸ್ ಮೊರಾಸ್ ಪ್ರಭು ಇವರನ್ನು ಬಿಷಪರು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಕೆ.ಪಿ.ಎಸ್.ಸಿ ಸದಸ್ಯರಾಗಿ ಕರ್ನಾಟಕ ಸರ್ಕಾರದಿಂದ ನೇಮಿಸಲ್ಪಟ್ಟ ಡಾ|ರೊನಾಲ್ಡ್ ಫೆರ್ನಾಂಡಿಸ್, ಪ್ರತಿಷ್ಠಿತ ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಅನಿಲ್ ಲೋಬೊ, ಫೆರ್ಮಾಯಿ ಇವರನ್ನು ಶಾಲು ಹೊದಿಸಿ, ಪೇಟಾ ತೊಡಿಸಿ, ಫಲಪುಷ್ಪ, ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು.

ಕೈಸ್ತ ಸಮುದಾಯ ದೇಶದ ಪ್ರಗತಿಗೆ ನೀಡಿದ, ನೀಡುತ್ತಿರುವ ವಿಶೇಷ ಸೇವೆಯನ್ನು ಉಲ್ಲೇಖಿಸುತ್ತಾ, ಪ್ರಸ್ತುತ ಸಂಕಷ್ಟದಲ್ಲಿರುವ ನಮ್ಮ ಸಹೋದರ-ಸಹೋದರಿಯರಿಗೆ ವೈಯಕ್ತಿಕವಾಗಿ ಸ್ಪಂಧಿಸಿ ಜಾತಿ, ಮತ, ಭೇಧವಿಲ್ಲದೆ ಸಮಾಜದಲ್ಲಿ ದುಡಿಯಲು, ಸೇವೆಗೈಯಲು ಕರೆ ನೀಡಿದರು. ಯುವ ಪೀಳಿಗೆ ದಾರಿ ತಪ್ಪದಂತೆ ಕ್ಲಪ್ತ ಸಮಯದಲ್ಲಿ ಸರಿಯಾದ ಮಾರ್ಗದರ್ಶನ, ಯುವಪ್ರತಿಭೆಗಳಿಗೆ ಸೂಕ್ತ ಅವಕಾಶ ನೀಡುವುದು, ದೊಡ್ಡ-ದೊಡ್ಡ ಕಟ್ಟಡಗಳ ಬದಲು, ಪ್ರೀತಿಯ ಹೃದಯಗಳ ಕಟ್ಟಡಗಳನ್ನು ಕಟ್ಟಿ ಮಾನವೀಯತೆಯನ್ನು ಮೆರೆಯಲು ಧರ್ಮಾಧ್ಯಕ್ಷರು ಕರೆ ನೀಡಿದರು.

ಉಪಾಧ್ಯಕ್ಷರಾದ ಶ್ರೀ ಡೇವಿಡ್ ಡಿ’ಸೋಜ, ಬಜ್ಪೆ ಇವರು ಸ್ವಾಗತಿಸಿ, ನಿಯೋಜಿತ ಅಧ್ಯಕ್ಷರಾದ ಶ್ರೀ ಸ್ಟೇನಿ ಲೋಬೊ, ಬಂಟ್ವಾಳ ವಂದನಾರ್ಪಣೆಗೈದರು. ಶ್ರೀ ಫ್ರಾನ್ಸಿಸ್ ಡಿ’ಕುನ್ಹ, ಮೂಲ್ಕಿ ಹಾಗೂ ಶ್ರೀಮತಿ ಸೆಲಿನ್ ರೋಡ್ರಿಗಸ್ ಮೂಲ್ಕಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಉಡುಪಿ ಕೆಥೊಲಿಕ್ ಸಭೆಯ ಅಧ್ಯಕ್ಷ ಶ್ರೀ ಆಲ್ವಿನ್ ಕ್ವಾಡ್ರಸ್, ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫರ್ಡಿನಾಂಡ್ ಗೊನ್ಸಾಲ್ವಿಸ್, ಮಂಗಳೂರು ಕೆಥೊಲಿಕ್ ಸಭೆಯ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಮ್ಯಾಥ್ಯು ವಾಸ್, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸೆಲೆಸ್ತಿನ್ ಡಿ’ಸೋಜ, ಸಮನ್ವಯ ಸಮಿತಿ ಸಹಸಂಚಾಲಕರಾದ ಶ್ರೀ ನೈಜಿಲ್ ಪಿರೇರಾ ಉಪಸ್ಥಿತರಿದ್ದರು. ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ ಕೆಥೊಲಿಕ್ ಸಭೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.


About Catholic Sabha

Comments powered by CComment

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.