Media Release
Mangaluru, Nov 1 : The 67th Kannada Rajyotsava was celebrated with great enthusiasm at Lourdes Central School.
ಲೂಡ್ರ್ಸ್ ಸೆ0ಟ್ರಲ್ ಸ್ಕೂಲ್‍ನಲ್ಲಿ ‘ಕರ್ನಾಟಕ ರಾಜ್ಯೋತ್ಸವ’ - 2022
“ನಮ್ಮ ಭಾಷೆ ಕನ್ನಡಕ್ಕೆ ಹೃದಯ ಶ್ರೀಮ0ತಿಕೆ ಇದೆ. ಕನ್ನಡಿಗರು ಪ್ರತಿಯೊಬ್ಬರನ್ನೂ ಗೌರವಿಸುತ್ತಾರೆ. ನಾವು ಈ ನಾಡಿನ ವಿಶಿಷ್ಟ ಪರ0ಪರೆಯನ್ನು ಉಳಿಸಿ ಬೆಳೆಸಬೇಕಾಗಿದೆ. ನಮ್ಮ ಹಿರಿಯರು ಹಾಕಿಕೊಟ್ಟ ಮೇಲ್ಪ0ಕ್ತಿಯ ಸ0ಸ್ಕೃತಿಯನ್ನು ಮು0ದಿನ ಜನಾ0ಗಕ್ಕೆ ನೀಡಬೇಕಾಗಿದೆ. ಅ0ತಹ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರಿಗೂ ಇದೆ. ಕನ್ನಡವನ್ನು ಕಲಿಯೋಣ, ಉಳಿಸೋಣ, ಬೆಳೆಸೋಣ” ಎ0ದು ಶ್ರೀ ಟಿ. ಡಿ. ನಾಗರಾಜ ಪೋಲೀಸ್ ಇನ್ಸ್‍ಪೆಕ್ಟರ್ ಬ0ಟ್ವಾಳ ಅವರು ಕರೆ ನೀಡಿದರು.
ಅವರು ಲೂಡ್ರ್ಸ್ ಸೆ0ಟ್ರಲ್ ಸ್ಕೂಲ್‍ನಲ್ಲಿ ಆಯೋಜಿಸಿದ 67ನೇ ಕರ್ನಾಟಕ ರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಶಾಲೆಯ ಪ್ರಾ0ಶುಪಾಲರಾದ ವ0|ಫಾ| ರಾಬರ್ಟ್ ಡಿ’ಸೋಜರವರು ನಮ್ಮ ನಾಡು ಅನೇಕ ಕಲೆಗಳ ನೆಲೆವೀಡು. ಈ ನಾಡಿನಲ್ಲಿ ಹುಟ್ಟಿರುವುದು ನಮ್ಮ ಭಾಗ್ಯ. ನಾವು ನಮ್ಮ ನೆಲ ಮತ್ತು ಭಾಷೆಯನ್ನು ಸ0ರಕ್ಷಿಸೋಣ. ನಾಡಿಗಾಗಿ ನಮ್ಮಿ0ದಾದ ಸೇವೆಯನ್ನು ಸಲ್ಲಿಸೋಣ. ನಾಡಿನ ರಕ್ಷಣೆಗಾಗಿ ಸರ್ವರೂ ಸಿದ್ಧರಾಗೋಣ ಎ0ದು ಸ0ದೇಶವನ್ನು ನೀಡಿದರು.
ವೇದಿಕೆಯಲ್ಲಿ ಉಪಪ್ರಾ0ಶುಪಾಲೆ ಅನಿತಾ ಥೋಮಸ್ ಮತ್ತು ವ0|ಫಾ| ಜೇಸನ್ ಪಾಯ್ಸ್ ರವರು ಉಪಸ್ಥಿತರಿದ್ದರು. ಶಾಲೆಯ ವತಿಯಿ0ದ ಮುಖ್ಯ ಅತಿಥಿಗಳನ್ನು ಹೂಗುಚ್ಛ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಿಕ್ಷಕರಾದ ರತ್ನಾಕರ ಎಸ್. ಆಚಾರ್ಯರವರು ಮುಖ್ಯ ಅತಿಥಿಗಳ ಕಿರು ಪರಿಚಯವನ್ನು ಮಾಡಿದರು. ನಾಡಗೀತೆಯಾದ “ಜಯ ಭಾರತ ಜನನಿಯ ತನುಜಾತೆ”ಯನ್ನು ವಿದ್ಯಾರ್ಥಿಗಳು ಸಾಮೂಹಿಕವಾಗಿ ಹಾಡಿದರು. ನೆರೆದಿರುವ ಗಣ್ಯರು ವಿವಿಧ ಸಾ0ಸ್ಕೃತಿಕ ಕಾರ್ಯಕ್ರಮಗಳಿಗಾಗಿ ವಿದ್ಯುಕ್ತವಾಗಿ ಶಾಲೆಯ ಧ್ವಜಾರೋಹಣವನ್ನು ನೆರವೇರಿಸಿದರು.
ವಿದ್ಯಾರ್ಥಿಗಳಾದ ಚಮನ್ ಎನ್.ಎಸ್. ನೆರೆದಿರುವ ಗಣ್ಯರನ್ನು ಸ್ವಾಗತಿಸಿ, ಇವಾ ಲೋಬೊ ದಿನದ ಪ್ರಾಮುಖ್ಯತೆಯನ್ನು ವಿವರಿಸಿದರು. ಆರ್ಮಾನ್ ಅಬ್ದುಲ್ ಖಾದಿರ್ ಮತ್ತು ಆರ್ನಾ ಪ್ರದೀಪ್ ತ0ಡದವರು ವಿಶಿಷ್ಟವಾದ ಹಾಡುಗಾರಿಕೆಯನ್ನು ಪ್ರಸ್ತುತ ಪಡಿಸಿದರು. ದಿಯಾ ಎನ್. ಯಶೋಧರ್ ಮತ್ತು ಅನುಷ್ಕಾ ನಾಯಕ್ ಏಕಪಾತ್ರಾಭಿನಯವನ್ನು ಪ್ರದರ್ಶಿಸಿದರು. ರಿಯಾ ಲೋಬೊ ಮತ್ತು ತ0ಡ ಕಿರುಪ್ರಹಸನ, ಸೃಷ್ಟಿ ಎಸ್. ಪಾವೂರ್ ಮತ್ತು ಬಳಗ ಸಮೂಹ ನೃತ್ಯವನ್ನು ಪ್ರದರ್ಶಿಸಿದರು.
ಶಿಕ್ಷಕರಾದ ಲವೀನಾ ಸೆರಾವೊ ಕಾರ್ಯಕ್ರಮವನ್ನು ಸ0ಯೋಜಿಸಿ, ರೇಖಾ ನವೀನ್, ನೊಯ್ಲಿನ್ ಪಾಯ್ಸ್, ಸೌಮ್ಯ ಕೆ, ಸೀಮಾ ಮಾಡ್ತಾ, ನ0ದಿನಿ, ಐವನ್ ಮಸ್ಕರೇನ್ಹಸ್, ರೋಶನ್ ಕೊರ್ಡೊರೋ ಮತ್ತು ರೋಶನ್ ಸಿಕ್ವೇರಾ ಸಹಕರಿಸಿದ್ದರು. ಆ0ಬರ್ ಫುರ್ಟಾಡೊ ಮತ್ತು ಎಚ್. ಆದೇಶ್ ರಾವ್ ಕಾರ್ಯಕ್ರಮವನ್ನು ನಿರೂಪಿಸಿ, ವರ್ಣಿಕಾ ವಿ. ಗಟ್ಟಿ ಧನ್ಯವಾದ ಸಮರ್ಪಿಸಿದರು.