Media Release

Photos: Stanly Bantwal

Madanthyar, Feb 5 : President of Catholic Sabha Mangalore Pradesh, Paul Rolphie D’Costa, in a press meet , whole-heartedly thanked all those who had contributed for the success of mega 'Catholic Maha Samavesha 2020' held at Madathyar Church premises on February 2, 2020.

Rolphie thanked all three bishops of Mangaluru, Puttur and Beltangady dioceses and heads and various committee members, who worked hard for the success of Maha Samavesha. He specially mentioned the support of Harish Poonja, Beltangady MLA, volunteers, arrangers of bus and other vehicles, donors and priests.

Joel Mendonca, convenor, Maha Samavesha, Fr Francis D’Souza, director, DCCW, Fr Ronald D’Souza, director, ICYM, Leon Saldanha, president ICYM and Elias Fernandes, media coordinator were present.


ಮಂಗಳೂರು : ಕಥೊಲಿಕ ಮಹಾ ಸಮಾವೇಶದ ಯಶಸ್ಸಿಗೆ ಶೄಮಿಸಿದ ಎಲ್ಲರಿಗೂ ಕಥೊಲಿಕ್ ಸಭಾದ ವತಿಯಿಂದ ಧನ್ಯವಾದ ಸಮರ್ಪಣೆ

ಬೆಳ್ತಂಗಡಿ ವಲಯದ ಮಡಂತ್ಯಾರು ಸೆಕ್ರೆಡ್ ಹಾರ್ಟ್ ಚರ್ಚ್ ಮೈದಾನದಲ್ಲಿ 02-02-2020ರಂದು ಮಂಗಳೂರು, ಬೆಳ್ತಂಗಡಿ, ಪುತ್ತೂರು ಧರ್ಮಪ್ರಾಂತ್ಯದ ಎಲ್ಲಾ ಕಥೊಲಿಕರನ್ನು ಒಗ್ಗೂಡಿಸುವ ಕಥೊಲಿಕ ಮಹಾ ಸಮಾವೇಶ – 2020 ನಡೆಯಿತು. ಸರಿಸುಮಾರು 35 ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಥೊಲಿಕ ಭಾಂದವರು ಈ ಸಮಾವೇಶದಲ್ಲಿ ಭಾಗವಹಿಸಿದರು.

ಪೂರ್ವಹ್ನ 9.00 ಗಂಟೆಗೆ ಮಡಂತ್ಯಾರು ಪೇಟೆಯಿಂದ ಭವ್ಯ ಮೆರವಣಿಗೆ ಪ್ರಾರಂಭಗೊಂಡು 9.40 ಗಂಟೆಗೆ ಉದ್ಘಾಟನ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಪರಮ ಪೂಜ್ಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹ, ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಪರಮ ಪೂಜ್ಯ ಡಾ| ಲಾರೆನ್ಸ್ ಮುಕ್ಕುಯಿ, ಪುತ್ತೂರು ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಪರಮ ಪೂಜ್ಯ ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್, ಕ್ರಮವಾಗಿ ಶ್ರೀಗಂಧ, ರಕ್ತಚಂದನ, ಬೀಟೆ ಗಿಡಗಳನ್ನು ನೆಡುವ ಮೂಲಕ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಪರಮ ಪೂಜ್ಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾರವರು ಉದ್ಘಾಟನ ಭಾಷಣ ಮಾಡಿದರು. ಪರಮ ಪೂಜ್ಯ ಡಾ| ಲಾರೆನ್ಸ್ ಮುಕ್ಕುಯಿರವರು ದಿಕ್ಸೂಚಿ ಭಾಷಣ ಮಾಡಿದರು. ಕಥೊಲಿಕ ಸಭಾ ಮಂಗ್ಳುರ್ ಪ್ರದೇಶದ ಅಧ್ಯಕ್ಷರಾದ ಶ್ರೀಯುತ ಪಾವ್ಲ್ ರೊಲ್ಪಿ ಡಿಕೋಸ್ತರವರು ಅಧ್ಯಕ್ಷಿಯ ಭಾಷಣ ಮಾಡಿದರು. ಮೂರು ಧರ್ಮಪ್ರಾಂತ್ಯದ ಶ್ರೇಷ್ಠ ಧರ್ಮಗುರುಗಳು ಉಪಸ್ಥಿತರಿದ್ದರು.

ಅನಿವಾಸಿ ಉದ್ಯಮಿ ಹಾಗೂ ಕಥೊಲಿಕ ಮುಖಂಡರಾದ ಶ್ರೀಯುತ ರೊನಾಲ್ಡ್ ಕುಲಾಸೊರವರನ್ನು ಈ ಸಂದರ್ಭದಲ್ಲಿ ವಿಶ್ವ ಭೂಷಣ ಎಂಬ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಧನಸಹಾಯವನ್ನು ನೀಡಿ ಸಹಕರಿಸಿದ ಸ್ಥಳೀಯ ಶಾಸಕರಾದ ಶ್ರೀ ಹರಿಶ್ ಪೂಂಜ ಹಾಗೂ ಇತರ ಗಣ್ಯರುಗಳನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಸರಕಾರದ ಮಾಜೀ ಸಚಿವರು, ಶಾಸಕರಾದ ಶ್ರೀ ಯು.ಟಿ. ಖಾದರ್, ವಿಧಾನ ಪರಿಷದ್ ಸದಸ್ಯರು, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್, ವಿಧಾನ ಪರಿಷದ್ ಸದಸ್ಯರಾದ ಶ್ರೀ ಐವನ್ ಡಿಸೋಜ, ಮಾಜೀ ಶಾಸಕರಾದ ಶ್ರೀ ಜೆ.ಆರ್ ಲೋಬೊ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕರ್ನಾಟಕ ರಾಜ್ಯ ಸರಕಾರ ಲೋಕಸೇವಾ ಆಯೋಗ ಸದಸ್ಯರಾದ ಶ್ರೀ ರೊನಾಲ್ಡ್ ಫೆರ್ನಾಂಡಿಸ್‍ರವರು ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರ ಮುಖ್ಯಮಂತ್ರಿಯವರ ಉಪ ಕಾರ್ಯದರ್ಶಿ ಶ್ರೀ ಅರುಣ್ ಫುರ್ಟಾದೊ, ವಂ| ಸ್ವಾಮಿ ಬಿನೊಯ್ ಜೋಸೆಫ್, ವಂ| ಸ್ವಾಮಿ ಮ್ಯಾಥ್ಯು ವಾಸ್, ವಂ| ಸ್ವಾಮಿ ರೊನಾಲ್ಡ್ ಡಿಸೋಜ, ವಂ| ಸ್ವಾಮಿ ಫ್ರಾನ್ಸಿಸ್ ಡಿಸೋಜ, ಶ್ರೀಯುತ ಲ್ಯಾನ್ಸಿ ಡಿಕುನ್ಹಾ, ವಂ| ಸ್ವಾಮಿ ಬೊನವೆಂಚರ್ ನಜರೆತ್, ವಂ| ಸ್ವಾಮಿ ಬೇಸಿಲ್ ವಾಸ್, ಶ್ರೀಯುತ ಅಲ್ವಿನ್ ಕ್ವಾರ್ಡಸ್, ಶ್ರೀಮತಿ ಟೆರಿ ಪಾಯ್ಸ್, ಶ್ರೀಯುತ ಲಿಯೋನ್ ಸಲ್ಡಾನ್ಹಾ ಹಾಗೂ ಕಥೊಲಿಕ್ ಸಭಾ ಕೇಂದ್ರಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

"ಈ ಸಮಾವೇಶಕ್ಕೆ 30 ಸಾವಿರ ಜನಸಂಖ್ಯೆ ಆಗಮಿಸುವ ನೀರಿಕ್ಷೆ ಇತ್ತು ಆದರೆ ಪತ್ರಿಕೆ, ದೃಶ್ಯ ಮಾಧ್ಯಮ ಹಾಗೂ ಮೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು, ವಲಯ ಧರ್ಮಗುರುಗಳು ಎಲ್ಲಾ ಚರ್ಚಿನ ಧರ್ಮಗುರುಗಳು, ಸಂಚಾಲಕರಾದ ಶ್ರೀ ಜೋಯಲ್ ಮೆಂಡೊನ್ಸಾ, ಕಾರ್ಯದರ್ಶಿ ಶ್ರೀ ವಾಲ್ಟರ್ ಮೊನಿಸ್, ಐ.ಸಿ.ವೈ.ಎಮ್. ನಿರ್ದೇಶಕರಾದ ವಂ| ಫಾ| ರೊನಾಲ್ಡ್ ಪ್ರಕಾಶ್ ಡಿಸೋಜ, ಬೆಳ್ತಂಗಡಿ ವಲಯ ಧರ್ಮಗುರುಗಳಾದ ವಂ|ಫಾ| ಬೊನವೆಂಚರ್ ನಜರೆತ್, ಫಾ| ಬೆಸಿಲ್ ವಾಸ್, ಫಾ| ಸ್ಟ್ಯಾನಿ ಪಿಂಟೊ, ಬೆಳ್ತಂಗಡಿ ಧರ್ಮಪ್ರಾಂತ್ಯದ ಕರ್ನಾಟಕ ಸಿರೋಮಲಬಾರ್ ಕಥೊಲಿಕ್ ಸಭಾ ನಿರ್ದೇಶಕರಾದ ವಂ|ಫಾ| ಬಿನೊಯ್ ಜೋಸೆಫ್, ಕಥೊಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕರಾದ ವಂ|ಫಾ| ಮ್ಯಾಥ್ಯು ವಾಸ್, ವಂ|ಫಾ| ಫ್ರಾನ್ಸಿಸ್ ಡಿಸೋಜ, ಮಂಗಳೂರು ಧರ್ಮಪ್ರಾಂತ್ಯ ಯುವ ಸಂಚಲನದ ಅಧ್ಯಕ್ಷರಾದ ಶ್ರೀ ಲಿಯೊನ್ ಸಲ್ಡಾನ್ಹಾ, ಮಂಗಳೂರು ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಟೆರಿ ಪಾಯ್ಸ್, ಮಡಂತ್ಯಾರು ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷರಾದ ಶ್ರೀ ಲಿಯೊ ರೊಡ್ರಿಗಸ್, ಎಲ್ಲಾ ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಮೂರು ಸಂಘಟನೆಯ ಎಲ್ಲಾ ವಲಯ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು, ಕೇಂದ್ರಿಯ ಮಾಜೀ ಅಧ್ಯಕ್ಷರುಗಳ ಸಹಕಾರದಿಂದ ಜಿಲ್ಲೆಯ ಮೂಲೆ ಮೂಲೆಗಳಿಂದ ಸುಮಾರು 35 ಸಾವಿರಕ್ಕಿಂತ ಹೆಚ್ಚಿನ ಕಥೊಲಿಕ ಕ್ರೈಸ್ತ ಭಾಂದವರು ಈ ಐತಿಹಾಸಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದು ಈ ಸಮಾವೇಶಕ್ಕೆ ಸಹಕರಿಸಿದ ಎಲ್ಲಾ ಬಂಧುಬಾಂಧವರಿಗೆ ಕೃತಜ್ಞತಪೂರ್ವಕವಾಗಿ ಧನ್ಯವಾದಗಳನ್ನು ಹೇಳಬಯಸುತ್ತೇನೆ."

"ಪ್ರತ್ಯೇಕವಾಗಿ ಈ ಸಂದರ್ಭದಲ್ಲಿ ಅವಿರತವಾಗಿ ದುಡಿದ 14 ಮಂದಿ ವಿವಿಧ ಸಮಿತಿಯ ಸಂಚಲಕಾರದ ಶ್ರೀ ಗ್ರೆಗೊರಿ ಸೆರಾ, ಶ್ರೀ ವಿನ್ಸೆಂಟ್ ಡಿಸೋಜ, ಶ್ರೀ ಲಿಯೋ ರೊಡ್ರಿಗಸ್, ಶ್ರೀ ಅರುಣ್, ಶ್ರೀ ಐವನ್ ಸಿಕ್ವೇರಾ, ಶ್ರೀ ವಿವೇಕ್ ಪಾಯ್ಸ್, ಶ್ರೀ ಫ್ರಾನ್ಸಿಸ್ ವಿ.ವಿ. ಶ್ರೀ ಡೆನಿಯಲ್ ಕ್ರಾಸ್ತಾ, ಶ್ರೀ ಹಿಲರಿ ಡಿಸೋಜ, ಶ್ರೀಮತಿ ಗ್ರೇಟ್ಟಾ ಡಿಸೋಜ, ಶ್ರೀ ಫಿಲಿಪ್ ಡಿಕುನ್ಹಾ, ಶ್ರೀ ಹ್ಯೂಬರ್ಟ್ ಲೋಬೊ, ಶ್ರೀ ಲ್ಯಾನ್ಸಿ ಸಲ್ವಾದೋರ್, ಶ್ರೀ ಜೆರೊಮ್ ಲೋಬೊ ಹಾಗೂ 3200 ಮಂದಿ ಸ್ವಯಂ ಸೇವಕರು ಈ ಸಮಾವೇಶವನ್ನು ಯಶಸ್ವಿಗೊಳಿಸಲು ಹಗಲು ರಾತ್ರಿ ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ದುಡಿದಿರುತ್ತಾರೆ. ಇವರಿಗೂ ಹಾಗೂ ಬಸ್ಸಿನ ವ್ಯವಸ್ಥೆ ಮಾಡಿದ ದೆರೆಬೈಲ್ ಚರ್ಚಿನ ಶ್ರೀ ಡೇನಿಸ್, ಫಜೀರು ಚರ್ಚಿನ ಶ್ರೀ ವಲೇರಿಯನ್ ಹಾಗೂ ಆಗಮಿಸಿದ ಎಲ್ಲಾ ಕಥೊಲಿಕ ಭಾಂದವರಿಗೂ ಮಿಸಸ್ ಮೀನಾ ಆ್ಯಂಡ್ ಫ್ಯಾಮಿಲಿ ಈ ಧಾರವಾಹಿಯಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ನೀಡಲು ಸಹಕರಿಸಿದ ಸ್ಟ್ಯಾನಿ ಬೆಳಾ ಹಾಗೂ ತಂಡದವರಿಗೂ ನನ್ನ ಮಿತ್ರರಾದ ಶ್ರೀ ಡೇನಿಸ್ ಡಿಸಿಲ್ವಾ ಹಾಗೂ ಧನ ಸಹಾಯ ನೀಡಿದ ಎಲ್ಲಾ ಧಾನಿಗಳಿಗೂ ಸೆಕ್ರೆಡ್ ಹಾರ್ಟ್ ಚರ್ಚ್ ಮೈದಾನ ಸಭೆಗಳನ್ನು ನಡೆಸಲು ಸಭಾ ಭವನ, ಕಚೇರಿಯನ್ನು ನೀಡಿ ಸಹಕರಿಸಿದ ವಂ| ಧರ್ಮಗುರುಗಳಾದ ಫಾ| ಬೇಸಿಲ್ ವಾಸ್ ಹಾಗೂ ಫಾ| ಜೆರೊಮ್ ಡಿಸೋಜ, ಫಾ| ಸ್ಟ್ಯಾನಿ ಹಾಗೂ ಪಾಲನಾ ಮಂಡಳಿಯ ಸರ್ವರಿಗೂ ಕೃತಜ್ಞತ ಪೂರ್ವಕವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ".

"ಅಂದಿನ ದಿನ ಟೋಲ್ ಶುಲ್ಕವನ್ನು ಪಡೆಯದೇ ಸಹಕರಿಸಿದ ಬೃಹ್ಮರಕುಟ್ಲು ಎಂಬಲ್ಲಿಯ ಶ್ರೀ ನವೀನ್ ಶೆಟ್ಟಿ ಹಾಗೂ ಸಿಬ್ಬಂಧಿ, ಬಂಟ್ವಾಳ ಡಿ.ವೈ.ಎಸ್.ಪಿ. ಶ್ರೀ ವೆಲಂಟೈನ್ ಡಿಸೋಜ, ಶ್ರೀ ಸಂದೇಶ್ ನಾಗರಾಜ್, ಠಾಣಾಧಿಕಾರಿ ಶ್ರೀಮತಿ ಸೌಮ್ಯ ಹಾಗೂ ಎಲ್ಲಾ ಅಧಿಕಾರಿಗಳಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ", ಎಂದು ಕಥೊಲಿಕ ಸಭಾ ಮಂಗ್ಳುರ್ ಪ್ರದೇಶದ ಅಧ್ಯಕ್ಷರಾದ ಪಾವ್ಲ್ ರೊಲ್ಪಿ ಡಿಕೋಸ್ತರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


About Catholic Sabha

About Indian Catholic Youth Movement (ICYM) 

Comments powered by CComment

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.