CT News

Naravi : June 8, 2017 : Naravi parishioners and well-wishes recently bid a heartfelt farewell to Rev. Fr. Louis Cutinha who served as the Parish Priest of the parish for the past 7 years. They also extended a warm welcome to the new Parish Priest Rev. Fr. Simon DSouza.


ನಾರಾವಿ ಕಾಲೇಜಿನಲ್ಲಿ ಸಂಚಾಲಕರಿಗೆ ಬೀಳ್ಕೊಡುವ ಸಮಾರಂಭ

June 8, 2017: ಸಂತ ಅಂತೋನಿ ಕಾಲೇಜು, ನಾರಾವಿ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದವರು 7 ವರ್ಷಗಳ ಕಾಲ ಕಾಲೇಜಿನ ಸಂಚಾಲಕರಾಗಿ ಸೇವೆ ಸಲ್ಲಿಸಿದ ವಂದನೀಯ ಸ್ವಾಮಿ ಲುವಿಸ್ ಕುಟಿನ್ಹಾರವರಿಗೆ ಪ್ರೀತಿ ಪೂರ್ವಕ ವಿದಾಯ ಕೋರಿದರು. ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊರವರು ಉಪಸ್ಯಾಸಕರರೊಡಗೂಡಿ ಶಾಲು ಹೊದಿಸಿ ಸಂಚಾಲಕರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಚಾಲಕರು ಎಲ್ಲರಿಗೆ ಕೃತಜ್ಞತೆಯನ್ನು ಸಲ್ಲಿಸಿ ಆಶೀರ್ವದಿಸಿದರು.


ನಾರಾವಿ ಚರ್ಚ್‍ಗೆ ನೂತನ ಧರ್ಮಗುರುಗಳ ನೇಮಕ

June 7, 2017: ಸಂತ ಅಂತೋನಿ ಚರ್ಚ್ ನಾರಾವಿಯಲ್ಲಿ 7 ವರ್ಷಗಳ ಅಪೂರ್ವ ಸೇವೆ ಸಲ್ಲಿಸಿ ಇದೀಗ ವರ್ಗಾವಣೆಗೊಂಡ ವಂದನೀಯ ಸ್ವಾಮಿ ಲುವಿಸ್ ಕುಟಿನ್ಹಾರವರ ಸ್ಥಾನದಲ್ಲಿ ನೂತನ ಧರ್ಮಗುರುಗಳಾಗಿ ಇಂದುಬೆಟ್ಟು ಚರ್ಚ್‍ನಿಂದ ಆಗಮಿಸಿದ ವಂದನೀಯ ಸ್ವಾಮಿ ಸೈಮನ್ ಡಿ’ಸೋಜರವರಿಗೆ ಚರ್ಚ್ ಭಕ್ತಾಧಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ, ಮುಖ್ಯೋಪಾಧ್ಯಾಯರಾದ ವಂದನೀಯ ಸ್ವಾಮಿ ಲ್ಯಾನ್ಸಿ ಸಲ್ಡಾನ್ಹ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


ನಾರಾವಿಯಲ್ಲಿ ಬೀಳ್ಕೊಡುವ ಸಮಾರಂಭ

June 3, 2017 : ಸಂತ ಅಂತೋನಿ ಚರ್ಚ್, ನಾರಾವಿಯಲ್ಲಿ ಧರ್ಮಗುರುಗಳಾಗಿ 7 ವರ್ಷಗಳ ಸೇವೆ ಸಲ್ಲಿಸಿದ ವಂದನೀಯ ಸ್ವಾಮಿ ಲುವಿಸ್‍ ಕುಟಿನ್ಹಾರವರಿಗೆ ಚರ್ಚ್ ವತಿಯಿಂದ ಬೀಳ್ಕೊಡುವ ಸಮಾರಂಭವನ್ನು ಆಯೋಜಿಸಲಾಯಿತು. ನಾರಾವಿಯಲ್ಲಿ ಚರ್ಚ್ ಮಾತ್ರವಲ್ಲದೆ ಶಿಕ್ಷಣ ಸಂಸ್ಥೆಗಳ ಸರ್ವಾಂಗೀಣ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ. ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ, ವಂದನೀಯ ಸ್ವಾಮಿ ಲ್ಯಾನ್ಸಿ ಜೋಯೆಲ್ ಸಲ್ಡಾನ್ಹ, ಚರ್ಚ್‍ ಉಪಾಧ್ಯಕ್ಷರಾದ ಶ್ರೀ ವಿನ್ಸೆಂಟ್‍ ರೊಡ್ರಿಗಸ್, ಕಾರ್ಯದರ್ಶಿ ಶ್ರೀಮತಿ ರೀಟಾ ಪಿಂಟೊ, ಸಿಸ್ಟರ್ ಗ್ರಾಸಿಯಾ ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಶಾಲು ಹೊದಿಸಿ, ಫಲಪುಷ್ಪ ಹಾಗೂ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ವಂದನೀಯ ಸ್ವಾಮಿ ಲುವಿಸ್‍ ಕುಟಿನ್ಹಾರವರು ನಾರಾವಿಯಲ್ಲಿ ಸೇವೆ ಸಲ್ಲಿಸಿ, ಮಂಗಳೂರಿನ ಫೆರ್ಮಾಯಿ ಚರ್ಚ್‍ಗೆ ವರ್ಗಾವಣೆಗೊಳ್ಳುತ್ತಿರುವಾಗ ಅವರಿಗೆ ಶುಭ ಹಾರೈಸುತ್ತೇವೆ.

Comments powered by CComment

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.