Media Release
Photos : Stanly Bantwal
Mangaluru, Jan 1 : 'Kulkulo' Musical Evening was presented at Mandd Sobhann's 228th Monthly Repertory held here at Kalangann on Sunday, 3rd January 2021.
ಮಂಗಳೂರು : ಕಲಾಂಗಣದಲ್ಲಿ "ಕುಲ್ಕುಲೊ" ಸಂಗೀತ ರಸಮಂಜರಿ
ಎರಿಕ್ ಒಝೇರಿಯೊಗೆ ಸನ್ಮಾನಪೂರ್ವಕವಾಗಿಸಿದ ಗೌರವ ಹಾಡು
ಮುಂಬಯಿ (ಆರ್ಬಿಐ), ಜ.04 : ಮಂಗಳೂರು ಇಲ್ಲಿನ ಕೊಂಕಣಿ ಪಾರಂಪರಿಕ ಕೇಂದ್ರ ಕಲಾಂಗಣದಲ್ಲಿ ಕಳೆದ ಭಾನುವಾರ "ಕುಲ್ಕುಲೊ" ಕೊಂಕಣಿ ಸಂಗೀತ ರಸಸಂಜೆ ಪ್ರಸ್ತುತವಾಯಿತು.
ಕೊಂಕಣಿಯ ಗೀತಸಾಹಿತಿ ಐರಿನ್ ಡಿಸೋಜ ಆಂಜೆಲೊರ್ ಗಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಮತ್ತು ಉಪಾಧ್ಯಕ್ಷ ನವೀನ್ ಲೋಬೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲಾಯ್ಡ್ ರೇಗೊ ಮತ್ತು ರೋಶನ್ ಡಿಸೋಜ ಆಂಜೆಲೊರ್ ಇವರು ರಚಿಸಿ, ಸಂಗೀತ ಸಂಯೋಜಿಸಿದ ಹಾಡುಗಳನ್ನು ಶಿಲ್ಪಾ ಕುಟಿನ್ಹಾ, ಹೆರಾಲ್ಡ್ ತಾವ್ರೊ, ಸ್ಟೀಫನ್ ಕುಟಿನ್ಹಾ, ಜೇಸನ್ ಲೋಬೊ, ಗ್ಯಾವಿನ್ ಮಿನೇಜಸ್, ಆನ್ಸನ್ ಮಿನೇಜಸ್, ಮನೋಜ್ ಕ್ರಾಸ್ತಾ, ರಿಯಾ ಡಿಸೋಜ ಮತ್ತು ಲಿಶಾ ಡಿಸಿಲ್ವಾ ಹಾಡಿದರು. ವಿಜಯ್ ರಸ್ಕಿನ್ಹಾ ನೇತೃತ್ವದ ಆಫ್ಬೀಟ್ ಕೈಕಂಬ ಯುವ ಪ್ರತಿಭಾ ತಂಡವೂ ಒಂದು ಹಾಡನ್ನು ಹಾಡಿತು.
ಗಾಯಕಿ ಶಿಲ್ಪಾ ಕುಟಿನ್ಹಾ ಇವರು ತರಬೇತಿ ನೀಡಿದ ಸ್ಟ್ರಮ್ಮರ್ಸ್ ಸಂಗೀತ ಶಾಲೆಯ ವಿದ್ಯಾರ್ಥಿಗಳು ಎರಿಕ್ ಒಝೇರಿಯೊ ಇವರಿಗೆ ಸನ್ಮಾನಪೂರ್ವಕವಾಗಿ ಹಾಡನ್ನು ಹಾಡಿ, ವಿಶಿಷ್ಟ ರೀತಿಯಲ್ಲಿ ಗೌರವಿಸಿದರು. ರಾಹುಲ್ ಪಿಂಟೊ ನಾಯಕತ್ವದ ನಾಚ್ ಸೊಭಾಣ್ ತಂಡವು ಮೂರು ನೃತ್ಯಗಳನ್ನು ಪ್ರಸ್ತುತಪಡಿಸಿತು.
ರೋಶನ್ ಡಿಸೋಜ ಆಂಜೆಲೊರ್ (ಲೀಡ್ ಗಿಟಾರ್) ನೇತೃತ್ವದಲ್ಲಿ ಮೆಲ್ವಿನ್ ಫೆರ್ನಾಂಡಿಸ್ (ಡ್ರಮ್ಸ್) ರಸ್ಸೆಲ್ ರಾಡ್ರಿಗಸ್ ಮತ್ತು ಮಿಲ್ಟನ್ ಬ್ರಾಗ್ಸ್ (ಕೀಬೋರ್ಡ್), ಅರ್ಥರ್ ಲೋಬೊ (ಬೇಝ್ ಗಿಟಾರ್), ವೀಕ್ಷಿತ್ ಮೂಲ್ಕಿ (ತಬಲಾ-ಡೋಲಕ್) ಮತ್ತು ರೂಬೆನ್ ಮಚಾದೊ (ಕೊಳಲು, ಸ್ಯಾಕ್ಸೊಫೋನ್) ಸಂಗೀತದಲ್ಲಿ ಸಹಕರಿಸಿದರು. ಲವೀನ ದಾಂತಿ ಸಹಕರಿಸಿದರು. ಲಾಯ್ಡ್ ರೇಗೊ ಕಾರ್ಯಕ್ರಮ ನಿರೂಪಿಸಿದರು.
Comments powered by CComment