Media Release

Belthangady, Sep 5 : Holy Redeemer School here held a meaningful celebration of Teacher's Day on Sep 5, 2020.


ಬೆಳ್ತಂಗಡಿ ಹೋಲಿ ರಿಡೀಮರ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ 

ಬೆಳ್ತಂಗಡಿ, Sep 5, 2020 : ಭಾರತದ ರಾಷ್ಟ್ರಪತಿ , ಉಪರಾಷ್ಟ್ರಪತಿ , ಶಿಕ್ಷಕ ಹಾಗು ಶ್ರೇಷ್ಟ ತತ್ವಜ್ಞಾನಿ ಸರ್ವಪಳ್ಳಿ ರಾಧಾಕೃಷ್ಣನ್ ರವರ ಜನುಮ ದಿನವನ್ನು ಶಿಕ್ಷಕರ ದಿನವಾಗಿ ಹೋಲಿ ರಿಡೀಮರ್ ಶಾಲೆಯಲ್ಲಿ ಆಚರಿಸಲಾಯಿತು. ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಗೌರವ ಸಲ್ಲಿಸಲಾಯಿತು. ಶಾಲಾ ಸಂಚಾಲಕರಾದ ಅತಿ ವಂ. ಫಾ. ಜೋಸೆಫ್ ಅಲ್ಫೋನ್ಸ್ ಕಾರ್ಡೋಜಾರವರು ಶಿಕ್ಷಕರು ದೇವರಿಗೆ ಸಮಾನ , ಮಕ್ಕಳ ಭವಿಷ್ಯವನ್ನು ರೂಪಿಸುವವರು ಶಿಕ್ಷಕರು. ಮಕ್ಕಳ ಭವಿಷ್ಯಕ್ಕೆ ದುಡಿಯುವ ಶಿಕ್ಷಕ ವೃಂದಕ್ಕೆ ಶುಭಹಾರೈಸಿ ಆಶೀರ್ವದಿಸಿದರು. ಶಾಲೆಯ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಶಿಕ್ಷಕರ ದಿನವನ್ನು ಉತ್ತಮ ರೀತಿಯಲ್ಲಿ ಆಚರಿಸಿದ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರು ಮತ್ತು ಸದಸ್ಯರನ್ನು ಶಾಲಾ ಮುಖ್ಯೋಪಾಧ್ಯಾಯರಾದ ವಂ. ಫಾ. ಜೇಸನ್ ಮೋನಿಸ್ ರವರು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಅಲೋಶಿಯಸ್ ಲೊಬೋರವರು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿನಿ ಕು. ಪ್ರಿಯಾಂಕಾ ಮಾಡ್ತಾ ರವರು ಶಿಕ್ಷಕರಿಗಾಗಿ ರಚಿಸಿದ ಕವನವನ್ನು ವಾಚಿಸಿದರು. ಶಿಕ್ಷಕರಿಗಾಗಿ ಹಲವಾರು ಅದೃಷ್ಟ ಆಟಗಳನ್ನು ಹಮ್ಮಿಕೊಳ್ಳಲಾಯಿತು. ಶ್ರೀಮತಿ ಸಿಲ್ವಿಯಾ ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಮತಿ ಮಮತಾ ಶೆಟ್ಟಿ ಸ್ವಾಗತಿಸಿ, ಶ್ರೀಮತಿ ಶರ್ಮಿಳಾ ವಂದಿಸಿದರು.

Comments powered by CComment

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.