Media Release

Naravi, Jan 31, 2020 : Commerce Department of St Antony College Naravi recently organised Commerce Fest -  "INSPIRA 2K20".


ಸಂತ ಅಂತೋನಿ ಪದವಿ ಕಾಲೇಜು, ನಾರಾವಿಯಲ್ಲಿ 'INSPIRA 2K20' - ಕಾಮರ್ಸ್ ಫೆಸ್ಟ್ ಆಚರಣೆ

Jan 31 : ಸಂತ ಅಂತೋನಿ ಪದವಿ ಕಾಲೇಜು, ನಾರಾವಿಯಲ್ಲಿ ವಾಣಿಜ್ಯ ಸಂಘದ ವತಿಯಿಂದ "INSPIRA 2K20" ಹೆಸರಿನಡಿ ಕಾಮರ್ಸ್ ಫೆಸ್ಟ್ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕರಾದ ಶ್ರೀ ದಿನೇಶ್ ಅಂಚನ್‍ರವರು ನಡೆಸಿ ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಪ್ರತಿಭೆಗಳನ್ನು ಇಂತಹ ಕಾರ್ಯಕ್ರಮಗಳ ಮೂಲಕ ವೃದ್ಧಿಸಲು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಳರಾದ ವಂದನೀಯ ಅರುಣ್ ವಿಲ್ಸನ್ ಲೋಬೊರವರು ವಹಿಸಿದ್ದರು. ವೇದಿಕೆಯಲ್ಲಿ ಉಪ ಪ್ರಾಂಶುಪಾಲರಾದ ಶ್ರೀ ಸಂತೋಷ್ ಸಲ್ಡಾನ್ಹ, ಸಂಯೋಜಕರಾದ ಶ್ರೀಮತಿ ಅನಿತಾ ಡಿ’ಸೋಜ ಹಾಗೂ ಶ್ರೀ ಸಂತೋಷ್, ವಿದ್ಯಾರ್ಥಿಗಳಾದ ಸಂಜಯ್ ಹಾಗೂ ಗುಣವತಿ ಉಪಸ್ಥಿತರಿದ್ದರು.

ಗುಣವತಿ ಸ್ವಾಗತಿಸಿ, ಸಾನಿಯಾ ವಂದಿಸಿದರು. ಸಂದ್ಯಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.


About St Antony Educational Institutions, Naravi

Comments powered by CComment

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.