Belthangady, Nov 22 : Holy Redeemer School Belthangady held Annual Sports Day on November 16, 2019.


ಬೆಳ್ತಂಗಡಿ ಹೋಲಿ ರಿಡೀಮರ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ 

Nov 22 : ಬೆಳ್ತಂಗಡಿ ಹೋಲಿ ರಿಡೀಮರ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ನವೆಂಬರ್ 16, 2019ರಂದು ನಡೆಸಲಾಯಿತು. ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರು ಆಗಮಿಸಿ ಶಾಲಾ ಧ್ವಜಾರೋಹಣಗೈದು ವಿದ್ಯಾರ್ಥಿಗಳು ದೈಹಿಕ ಸದೃಢರಾಗಿದ್ದು ಎಲ್ಲಾ ಆಟಗಳನ್ನು ಆಡಬೇಕು. ಶಾಲೆಯಲ್ಲಿ ಒದಗಿಸುವ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಉತ್ತಮ ಭವಿಷ್ಯವನ್ನು ಹೊಂದುವಂತಾಗಲಿ ಎಂದು ಶುಭ ಹಾರೈಸಿದರು . ಶಾಲಾ ಸಂಚಾಲಕರಾದ ವಂ. ಫಾ. ಬೊನವೆಂಚರ್ ನಝ್ರೇತ್ ರವರು ಕಾರ್ಯಕ್ರಮವು ಉತ್ತಮ ರೀತಿಯಲ್ಲಿ ಮೂಡಿ ಬರಲಿ ಎಂದು ಶುಭ ಹಾರೈಸಿದರು.

ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಮತಾ ಶೆಟ್ಟಿ, ಚರ್ಚ್ಪಾಲನಾ ಮಂಡಳಿಯ ಕಾರ್ಯದರ್ಶಿ ಶ್ರೀ ಮತಿ ಪೌಲಿನ್ ರೇಗೋ, ಸದಸ್ಯರಾದ ಶ್ರೀ ಅಲೋಶಿಯಸ್ ಲೋಬೋ, ಕ್ರೀಡಾ ಪ್ರತಿನಿಧಿ ಶ್ರೀ ವಿನ್ಸೆಂಟ್ ಡಿ’ಸೋಜ , ಪೋಷಕರು ,ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ವಾದ್ಯತಂಡದೊಂದಿಗೆ ಶಾಲಾ ನಾಯಕ ಹಾಗೂ ವಿವಿಧ ತಂಡಗಳ ವಿದ್ಯಾರ್ಥಿಗಳು ಶಾಲಾ ಧ್ವಜಕ್ಕೆ ಗೌರವವನ್ನು ಸಲ್ಲಿಸಿದರು. ಜಿಲ್ಲಾಮಟ್ಟದಲ್ಲಿ ಸಾಧನೆಗೈದ ಕ್ರೀಡಾ ಸಾಧಕರು ಕ್ರೀಡಾಜ್ಯೋತಿಯನ್ನು ಬೆಳಗಿಸಿದರು. ವಿದ್ಯಾರ್ಥಿ ಪ್ರತೀಕ್ ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದರು.

ವಿದ್ಯಾರ್ಥಿಗಳಿಗೆ ಹಲವಾರು ಅದೃಷ್ಟ ಆಟ, ವೈಯಕ್ತಿಕ ಮತ್ತು ಗುಂಪು ಆಟೋಟ ಸ್ಪರ್ಧೆಗಳನ್ನು ನಡೆಸಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು . ಪೋಷಕರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ವಂ. ಫಾ. ಜೇಸನ್ ಮೋನಿಸ್ ಕಾರ್ಯಕ್ರಮಕ್ಕೆ ಮಾರ್ಗದರ್ಶನವನ್ನು ನೀಡಿದರು. ವಿದ್ಯಾರ್ಥಿಗಳಾದ ಸ್ನೇಹ ಕಾರ್ಯಕ್ರಮ ನಿರೂಪಿಸಿ. ಲವಿಶಾ ಸ್ವಾಗತಿಸಿ, ವೆಲ್ರೋಯ್ ಡಿ’ಸೋಜ ವಂದಿಸಿದರು. ಶಿಕ್ಷಕರಾದ ಶ್ರೀ ಶರತ್ ಸಂತೋಷ್ ಪಿಂಟೋ ಸಹಕರಿಸಿದರು.


About Holy Redeemer School, Belthangady

Comments powered by CComment

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.