Naravi, Nov 21, 2019 : NSS Unit of St Antony College Naravi held Annual Special Camp recently.

ಸಂತ ಅಂತೋನಿ ಪದವಿ ಕಾಲೇಜು, ನಾರಾವಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ : ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ 

Nov 21, 2019 : ಸಂತ ಅಂತೋನಿ ಪದವಿ ಕಾಲೇಜು, ನಾರಾವಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ 2019ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ಸಂತ ವಿಕ್ಟರ್ ಅನುದಾಣಿತ ಹಿರಿಯ ಪ್ರಾಥಮಿಕ ಶಾಲೆ, ನೆಲ್ಲಿಕಾರು ಇಲ್ಲಿ ನಡೆಯಿತು. ಶಿಬಿರವನ್ನು ಉದ್ಘಾಟಿಸಿದ ಸಂತ ವಿಕ್ಟರ್ ಚರ್ಚ್‍ನ ಧರ್ಮಗುರುಗಳಾದ ವಂ| ಸ್ವಾ| ಮೆಲ್ವಿನ್ ಡಿ’ಸೋಜರವರು ಮಾತನಾಡಿ ಯುವಜನರು ಸೇವೆಯ ಮುಖಾಂತರ ತಮ್ಮ ಸಾಮಥ್ರ್ಯವನ್ನು ಸಮಾಜಕ್ಕೆ ಅರ್ಪಿಸಬೇಕು ಎಂದರು. ಸಭಾಧ್ಯಕ್ಷತೆಯನ್ನು ವಹಿಸಿದ ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ| ಸ್ವಾ| ಸೈಮನ್ ಡಿ’ಸೋಜರವರು ಆಶೀರ್ವಚನ ನೀಡಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ವಂ| ಸ್ವಾ| ಅರುಣ್ ವಿಲ್ಸನ್ ಲೋಬೊರವರು ಮಾತನಾಡಿ ಶಿಬಿರಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್, ನೆಲ್ಲಿಕಾರು ಇದರ ಸದಸ್ಯರಾದ ಶ್ರೀ ಹರೀಶ್ ಆಚಾರ್ಯ, ಉದ್ಯಮಿಗಳಾದ ಶ್ರೀ ಶ್ರೇಣಿಕ್‍ರಾಜ್, ನಾರಾವಿ ಮತ್ತು ನೆಲ್ಲಿಕಾರ್ ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀಮತಿ ರೀಟಾ ಪಿಂಟೊ ಮತ್ತು ಶ್ರೀಮತಿ ಬೆನೆಡಿಕ್ಟಾ ತಾವ್ರೊ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವೀರಾ ಸಿಂತಿಯಾ ಮೋರಾಸ್ ಮತ್ತಿತರರು ಉಪಸ್ಥಿತರಿದ್ದರು. ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವರ್ಷದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಯೋಜನಾಧಿಕಾರಿಗಳಾದ ಶ್ರೀ ಅವಿಲ್ ಮೋರಾಸ್ ಸ್ವಾಗತಿಸಿ, ಘಟಕ ಕಾರ್ಯದರ್ಶಿ ಗೀತಾ ಪಿ.ಡಿ. ವಂದಿಸಿದರು. ಹಸಿರೇ ಉಸಿರು ಎಂಬ ಧ್ಯೇಯದೊಂದಿಗೆ ವೇದಿಕೆಯಲ್ಲಿದ್ದ ಗಣ್ಯರಿಗೆ ಹೂವಿನ ಗಿಡಗಳನ್ನು ನೀಡಿ ಗೌರವಿಸಲಾಯಿತು. ಶರತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.


About St. Antony College, Naravi

Comments powered by CComment

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.