Belthangady, Nov 2 : Holy Redeemer School Belthangady celebrated Deepavali Festival on October 30, 2019.

ಬೆಳ್ತಂಗಡಿ ಹೋಲಿ ರಿಡೀಮರ್ ಶಾಲೆಯಲ್ಲಿ ದೀಪಾವಳಿ ಆಚರಣೆ 

Nov 2 : ದೀಪಗಳ ಹಬ್ಬ ದೀಪಾವಳಿಯನ್ನು ಹೋಲಿ ರಿಡೀಮರ್ ಶಾಲೆಯಲ್ಲಿ ಅ. 30 ರಂದು ಸಂಭ್ರಮದಿAದ ಆಚರಿಸಲಾಯಿತು. ಮುಖ್ಯ ಅತಿಥಿ ಶ್ರೀ ಪಾವಡಪ್ಪ ದೊಡಮನಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಲೆಗಳಲ್ಲಿ ಇಂತಹ ಧಾರ್ಮಿಕ ಹಬ್ಬಗಳನ್ನು ಆಚರಿಸುವುದರಿಂದ ಮಕ್ಕಳಲ್ಲಿ ಧಾರ್ಮಿಕ ಸೌಹಾರ್ದತೆಯನ್ನು ಮೂಡಿಸಬಹುದು. . ಎಲ್ಲಾ ಧರ್ಮಗಳನ್ನು ಗೌರವಿಸಿ ನಾವೆಲ್ಲರು ವಿಶ್ವಮಾನವರಾಗಬೇಕೆಂಬ ಸಂದೇಶವನ್ನು ನೀಡಿದರು. ಶಾಲೆಯಲ್ಲಿ ಇಂತಹ ವಿಭೃಂಜಣೆಯ ಆಚರಣೆ ನೋಡಿ ಶಿಕ್ಷಕರಿಗೆ, ಶಾಲಾ ಮುಖ್ಯಸ್ಥರಿಗೆ ಧನ್ಯವಾದ ತಿಳಿಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ವಂ. ಫಾ. ಜೇಸನ್ ಮೋನಿಸ್ ರವರು ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನೊಳಗೊಂಡ ದೀಪಗಳಾಗಿ ಜಗತ್ತಿಗೆ ಜ್ಞಾನವೆಂಬ ಬೆಳಕನ್ನು ಪಸರಿಸಬೇಕೆಂದು ನುಡಿದು ಶುಭಹಾರೈಸಿದರು.

ವಿದ್ಯಾರ್ಥಿಗಳು ದೀಪಾವಳಿ ಹಬ್ಬದ ಹಿನ್ನಲೆ ಮಹತ್ವವನ್ನು ಹಾಡು , ನೃತ್ಯ, ರೂಪಕಗಳ ಮೂಲಕ ಪ್ರದರ್ಶಿಸಿದರು. ವಿದಾರ್ಥಿನಿಯರಾದ ಸ್ನೇಹಾ, ಮುಫೈಲಾ, ರೀಶೆಲ್ ಧಾರ್ಮಿಕ ಗ್ರಂಥಗಳನ್ನು ಪಠಿಸಿ, ಆನ್ಸೆಲ್ಮಾ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ಶಾಜನ್ ದೀಪಾವಳಿ ಹಬ್ಬದ ಕುರಿತು ಮಾತನಾಡಿದರು. ವರ್ಣರಂಜಿತ ರಂಗವಲ್ಲಿ, ಸಾಲು ದೀಪಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗನ್ನು ನೀಡಿದವು.

ವಿದ್ಯಾರ್ಥಿಗಳಾದ ವಿಲೀಟಾ ಕಾರ್ಯಕ್ರಮ ನಿರೂಪಿಸಿ, ಅವನಿ ಸ್ವಾಗತಿಸಿ, ರೋಹನ್ ವಂದಿಸಿದರು.


About Most Holy Redeemer Church, Belthangady

Comments powered by CComment

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.