Media Release

Naravi, Oct 15, 2019 : National Service Scheme (NSS) Unit of St Antony College here, celebrated Valedictory program of Golden Jubilee recently.


ನಾರಾವಿ ಕಾಲೇಜು : NSS ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ 

Oct 15, 2019 : ರಾಷ್ಟ್ರೀಯ ಸೇವಾ ಯೋಜನೆಯ 50 ವರ್ಷಗಳ ಸುವರ್ಣ ವರ್ಷದ ಸಮಾರೋಪ ಸಮಾರಂಭವು ಸಂತ ಅಂತೋನಿ ಪದವಿ ಕಾಲೇಜು, ನಾರಾವಿಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ರವಿ ಎಸ್. ಎಮ್. ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ್, ನಾರಾವಿ ಇವರು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಮುಖಾಂತರ ಯುವ ಜನರು ಯಾವ ರೀತಿ ನವ ಭಾರತದ ನಿರ್ಮಾಣದಲ್ಲಿ ತೊಡಗಬಹುದು ಮತ್ತು ಸೇವೆಯ ಮುಖಾಂತರ ಸಮಾಜಕ್ಕೆ ಯಾವ ರೀತಿ ಕೊಡುಗೆಗಳನ್ನು ನೀಡಬಹುದು ಎಂದು ವಿವರಿಸಿದರು.

ಸಮಾರೋಪ ಭಾಷಣ ಮಾಡಿದ ನಿಕಟಪೂರ್ವ ಯೋಜನಾಧಿಕಾರಿಗಳಾದ ಶ್ರೀ ದಿನೇಶ್ ಬಿ.ಕೆ ಇವರು ಸೇವೆಯ ಮುಖಾಂತರ ವಿದ್ಯಾರ್ಥಿಗಳ ಜೀವನದಲ್ಲಿ ಆಗುವ ಬದಲಾವಣೆಗಳ ಬಗ್ಗೆ ವಿವರಿಸಿದರು. ಸಭಾಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಫಾ| ಅರುಣ್ ವಿಲ್ಸನ್ ಲೋಬೊ ಇವರು ಸುವರ್ಣ ಮಹೋತ್ಸವ ವರ್ಷದಲ್ಲಿ ಕೈಗೊಂಡ ಕಾರ್ಯಕ್ರಮಗಳನ್ನು ಶ್ಲಾಘಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪ ಪ್ರಾಂಶುಪಾಲರಾದ ಶ್ರೀ ಸಂತೋಷ್ ಸಲ್ಡಾನ್ಹ ಉಪಸ್ಥಿತರಿದ್ದರು.

ಯೋಜನಾಧಿಕಾರಿಗಳಾದ ಶ್ರೀ ಅವಿಲ್ ಮೋರಾಸ್, ಇವರು ಸುವರ್ಣ ಮಹೋತ್ಸವ ವರ್ಷದಲ್ಲಿ ಕೈಗೊಂಡ ಕಾರ್ಯಕ್ರಮಗಳ ವಿವರಗಳನ್ನು ನೀಡಿ ಸ್ವಾಗತಿಸಿದರು. ಘಟಕದ ಕಾರ್ಯದರ್ಶಿ ಗೀತಾ ವಂದಿಸಿ, ಶರತ್ ಎಸ್. ಕಾರ್ಯಕ್ರಮ ನಿರೂಪಿಸಿದರು.

Comments powered by CComment

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.