Belthangady, Oct 2 : Holy Redeemer School Belthangady celebrates Gandhi Jayanthi on Oct 2, 2019.


ಬೆಳ್ತಂಗಡಿ ಹೋಲಿ ರಿಡೀಮರ್ ಶಾಲೆಯಲ್ಲಿ ಗಾಂಧೀಜಯಂತಿ ಆಚರಣೆ 

Oct 2 : ಹೋಲಿ ರಿಡೀಮರ್ ಶಾಲೆಯಲ್ಲಿ ಗಾಂಧೀಜಯಂತಿಯನ್ನು ಆಚರಿಸಲಾಯಿತು.

ಶಾಲಾ ಆವರಣವನ್ನು ಪ್ಲಾಸ್ಟಿಕ್ , ಕಸ ಹಾಗೂ ಇತರ ತ್ಯಾಜ್ಯ ವಸ್ತುಗಳಿಂದ ಮುಕ್ತಗೊಳಿಸಲಾಯಿತು. ರಾಷ್ಟ್ರಪಿತನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸರ್ವಧರ್ಮ ಪ್ರಾರ್ಥನೆಗಳನ್ನು ಮಾಡಲಾಯಿತು. ವಿದ್ಯಾರ್ಥಿನಿ ಲೀಟಾ ಬಾಪೂಜಿಯ ಕುರಿತು ಮಾತನಾಡಿದರು.

ನಾವು ಒಳ್ಳೆಯ ಮನಸ್ಸು ಮತ್ತು ಯೋಚನೆಗಳನ್ನು ಹೊಂದಿ, ವೈಯಕ್ತಿಕ ಸ್ವಚ್ಚತೆಯ ಜೊತೆಗೆ ಪರಿಸರ ಸ್ವಚ್ಚತೆಯ ಕಡೆಗೆ ಒಲವು ಮೂಡಿಸಿದಾಗ ಸ್ವಚ್ಚ ಮತ್ತು ನಿರ್ಮಲ ಭಾರತದ ಕನಸು ನನಸಾಗುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ವಂ. ಫಾ. ಜೇಸನ್ ಮೋನಿಸ್ ರವರು ನುಡಿದರು.

ವಿದ್ಯಾರ್ಥಿನಿ ರಿಯೋನ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.


About Most Holy Redeemer Church, Belthangady

Comments powered by CComment

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.