Belthangady, Aug 31, 2019 : Holy Redeemer School students bagged many prizes at Zonal Level 'Prathiba Karanji' held recently.


ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬೆಳ್ತಂಗಡಿ ಹೋಲಿ ರಿಡೀಮರ್ ಶಾಲಾ ವಿದ್ಯಾರ್ಥಿಗಳ ಸಾಧನೆ

Aug 31 : ವಲಯ ಮಟ್ಟದ ಪ್ರತಿಭಾ ಕಾರಂಜಿಯು ಕೊಯ್ಯೂರು ಕಸಬ ಮತ್ತು ಕೊಯ್ಯೂರು ಆದೂರು ಪೆರಾಲ್ ಶಾಲೆಗಳಲ್ಲಿ ನಡೆದಿದ್ದು ಬೆಳ್ತಂಗಡಿ ಹೋಲಿ ರಿಡೀಮರ್ ಶಾಲೆಯು ಹಲವು ಬಹುಮಾನಗಳನ್ನು ಪಡೆದಿರುತ್ತದೆ.

ಕಿರಿಯರ ವಿಭಾಗದ ಇಂಗ್ಲೀಷ್ ಕಂಠಪಾಠದಲ್ಲಿ ಮರ್ವಿನ್ ಡಿಸೋಜ (4ನೇ) ಪ್ರಥಮ ಸ್ಥಾನ, ಧಾರ್ಮಿಕ ಪಠಣ ಸಂಸ್ಕøತದಲ್ಲಿ ಪ್ರದ್ಯೋತ್ ರಾವ್ (4ನೇ) ಪ್ರಥಮ ಸ್ಥಾನ , ಕೊಂಕಣಿ ಕಂಠಪಾಠದಲ್ಲಿ ಸೋನಿಯಾ ಬೆನ್ನಿಸ್ (3ನೇ) ದ್ವಿತೀಯ , ಹಿಂದಿ ಕಂಠಪಾಠದಲ್ಲಿ ಸಿಯಾನ (3ನೇ) ತೃತೀಯ , ಧಾರ್ಮಿಕ ಪಠಣ ಅರೇಬಿಕ್ ನಲ್ಲಿ ಮೊಹಮ್ಮದ್ ಮೊಗಾದ್ದಮ್ (4ನೇ) ತೃತೀಯ, ಲಘುಸಂಗೀತದಲ್ಲಿ ಸಿಂಚನ(4ನೇ) ತೃತೀಯಸ್ಥಾನ, ಜಾನಪದನೃತ್ಯದಲ್ಲಿ ಮನಸ್ವಿ(4ನೇ), ಸುದೀಕ್ಷಾ (4ನೇ), ಖುಷಿ (4ನೇ) , ರಿಯೋನ ಸಿಕ್ವೇರ(4ನೇ), ಲಹರಿ (4ನೇ), ಸಾನ್ವಿ(2ನೇ) ದ್ವಿತೀಯಸ್ಥಾನ, ದೇಶಭಕ್ತಿಗೀತೆಯಲ್ಲಿ ಸಿಂಚನ (4ನೇ), ಅವಿಟ (4ನೇ), ಸೋಹನ್ (4ನೇ), ಶಮಂತ್ (3ನೇ), ಅನೀಶಾ (3ನೇ), ಕೃತಿಕಾ (2ನೇ) ದ್ವಿತೀಯ ಸ್ಥಾನ, ಕೋಲಾಟದಲ್ಲಿ ಮಾನ್ಯ (4ನೇ), ತನ್ವಿ(4ನೇ), ಅನ್ರಿಝಾ (4ನೇ), ಮಾನ್ವಿ (3ನೇ), ರೀಶೆಲ್ (3ನೇ), ಮೆಲಿಶಾ (3ನೇ) ತೃತೀಯ ಸ್ಥಾನ, ಕವ್ವಾಲಿಯಲ್ಲಿ ಮೊಹಮ್ಮದ್ ಶಫೀಕ್ (4ನೇ), ವೀವನ್ ಪಿಂಟೋ (4ನೇ), ಮೊಹಮ್ಮದ್ ಅಝೀಮ್ (4ನೇ), ಮೊಹಮ್ಮದ್ ಸಾಬಿತ್ (4ನೇ), ಝೈಮಾ (4ನೇ), ಶಿಬ್ಲಾ (4ನೇ) ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಹಿರಿಯರ ವಿಭಾಗದ ಹಿಂದಿ ಕಂಠಪಾಠದಲ್ಲಿ ಈವೋನ್ ಡಿ’ಸೋಜ(7ನೇ) ಪ್ರಥಮ ಸ್ಥಾನ, ಉರ್ದು ಕಂಠಪಾಠದಲ್ಲಿ ಸಹನಾ ಪರ್ವಿನ್ (7ನೇ)ಪ್ರಥಮ, ಮರಾಠಿ ಕಂಠಪಾಠದಲ್ಲಿ ಓಂಕಾರ್ (7ನೇ) ಪ್ರಥಮ, ಧಾರ್ಮಿಕ ಪಠಣ ಸಂಸ್ಕøತದಲ್ಲಿ ಸಂಹಿತಾ (7ನೇ) ಪ್ರಥಮ ಸ್ಥಾನ ಮತ್ತು ಆಶುಭಾಷಣದಲ್ಲಿ ದ್ವಿತೀಯ ಸ್ಥಾನ, ಧಾರ್ಮಿಕ ಪಠಣ ಅರೇಬಿಕ್ ನಲ್ಲಿ ಸಂಶಿದಾಬಾನು (7ನೇ) ಪ್ರಥಮ ಸ್ಥಾನ, ಅಭಿನಯಗೀತೆಯಲ್ಲಿ ಸಾಯಿದರ್ಶಿನಿ (7ನೇ) ದ್ವಿತೀಯ ಸ್ಥಾನ, ಭಕ್ತಿಗೀತೆಯಲ್ಲಿ ವೈಷ್ಣವಿ (7ನೇ) ತೃತೀಯ ಸ್ಥಾನ, ತೆಲುಗು ಕಂಠಪಾಠದಲ್ಲಿ ರಿಯಾ ಸಿಕ್ವೇರ(7ನೇ) ತೃತೀಯ ಸ್ಥಾನ , ಯಕ್ಷಗಾನದಲ್ಲಿ ದ್ರವ್ಯ(6ನೇ) ತೃತೀಯ ಸ್ಥಾನ, ಜಾನಪದ ನೃತ್ಯದಲ್ಲಿ ಸಾಯಿದರ್ಶಿನಿ (7ನೇ), ಪ್ರತೀಕ್ಷಾ ದೊಡಮನಿ (7ನೇ) , ವಿಶೃತಾ (7ನೇ), ವಿನಿಶಾ ಜಾನಿಸ್(6ನೇ), ಶಿವಾನಿ (6ನೇ), ಶ್ರಾವ್ಯ (6ನೇ), ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಪ್ರೌಢಶಾಲಾ ವಿಭಾಗದ ಸ್ಪರ್ಧೆಯು ಸರಕಾರಿ ಪ್ರೌಢಶಾಲೆ ಅಳದಂಗಡಿಯಲ್ಲಿ ನಡೆದಿದ್ದು ಜೋತ್ಸ್ನಾ (8ನೇ) ಜಾನಪದ ಗೀತೆಯಲ್ಲಿ ದ್ವಿತೀಯ ಸ್ಥಾನ, ಕೆವಿನ್ ಲೋಬೋ (10ನೇ) ಮಿಮಿಕ್ರಿಯಲ್ಲಿ ದ್ವಿತೀಯ ಸ್ಥಾನ, ಪ್ರಿನ್ಸಿಟ ಡಿ’ಸೋಜ (10 ನೇ) ಕೊಂಕಣಿ ಭಾಷಣದಲ್ಲಿ ಪ್ರಥಮ ಸ್ಥಾನ, ಹಂಸಿನಿ (9ನೇ) ಯಕ್ಷಗಾನದಲ್ಲಿ ಪ್ರಥಮ ಸ್ಥಾನ , ಜಾನಪದ ನೃತ್ಯದಲ್ಲಿ ಹಂಸಿನಿ (9ನೇ), ದೀಪಾ (9ನೇ), ಮಾನಸ (9ನೇ), ಅನುಶಾ ಗೋವಿಯಸ್ (9ನೇ), ಗ್ಲೆನಿಟಾ ಮೋನಿಸ್ (8ನೇ), ಸೃಷ್ಟಿ (8ನೇ), ಜ್ಯೋತಿಕಾ (9ನೇ) ದ್ವಿತೀಯ ಸ್ಥಾನ, ಜಾನಪದಗೀತೆಯಲ್ಲಿ ಸ್ನೇಹಾ (8ನೇ), ಸಿಂಚನಾ (8ನೇ), ಶಮಾ (8ನೇ), ಅನುಷಾ (9ನೇ), ಆನ್ಸೆಲ್ಮಾ ಡಿ’ಸೋಜ (10ನೇ), ಅವನಿ(10ನೇ), ಡೀನಾ (8ನೇ), ಮೆಲ್ವಿನ್ ಕ್ರಾಸ್ತ (9ನೇ), ದ್ವಿತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.

ವಿಜೇತ ವಿದ್ಯಾರ್ಥಿಗಳನ್ನು ಮತ್ತು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕರಾದ ವಂ.ಫಾ . ಬೊನವೆಂಚರ್ ನಝ್ರೆತ್ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ವಂ. ಫಾ ಜೇಸನ್ ಮೋನಿಸ್‍ರವರು ಅಭಿನಂದಿಸಿದರು.


About Holy Redeemer School, Belthangady

Comments powered by CComment

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.