Media Release

Naravi, Dec 5, 2018 : NSS Annual Camp of St. Antony College , Naravi was inaugurated at St.Thomas aided higher primary school, Chelur village of Bantwal taluk recently.


 

NSS ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

ಸಂತ ಅಂತೋನಿ ಪದವಿ ಕಾಲೇಜು, ನಾರಾವಿ ಇಲ್ಲಿನ NSS ವಿದ್ಯಾರ್ಥಿಗಳ ವಾರ್ಷಿಕ ವಿಶೇಷ ಶಿಬಿರವು ಬಂಟ್ವಾಳ ತಾಲೂಕು, ಚೇಳೂರಿನ ಸಂತ ತೋಮಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಸ್ವಾಮಿ ಸೈಮನ್ ಡಿ’ಸೋಜರವರು ವಹಿಸಿದ್ದರು. ಶಿಬಿರದ ಉದ್ಘಾಟನೆಯನ್ನು ಸಂತ ತೋಮಸ್ ಚರ್ಚ್ ಚೇಳೂರು ಇಲ್ಲಿ ಧರ್ಮಗುರುಗಳಾದ ವಂದನೀಯ ಸ್ವಾಮಿ ಲಾರೆನ್ಸ್ ಮಸ್ಕರೇನ್ಹಸ್ ನೆರವೇರಿಸಿ ವಿದ್ಯಾರ್ಥಿಗಳ ಚಿಂತನೆ ಹಾಗೂ ಜೀವನದ ರೀತಿ ವಿಶಾಲವಾಗಿರಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂತ ಅಂತೋನಿ ಕಾಲೇಜು, ನಾರಾವಿಯ ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ, ಉಪ ಪ್ರಾಂಶುಪಾಲರಾದ ಶ್ರೀ ಸಂತೋಷ್ ಸಲ್ಡಾನ್ಹ, ಸಂತ ತೋಮಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಲ್ಯಾನ್ಸಿ ರೊಡ್ರಿಗಸ್, ನಾರಾವಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಅನಿಲ್ ರೋಶನ್ ಮತ್ತು ಘಟಕದ ನಾಯಕರಾದ ಶರತ್ ಹಾಗೂ ಸುಶ್ಮಿತಾ ಉಪಸ್ಥಿತರಿದ್ದರು.

ಘಟಕದ ಯೋಜನಾಧಿಕಾರಿ ಶ್ರೀ ಅವಿಲ್ ಮೋರಾಸ್ ಸ್ವಾಗತಿಸಿದರು. ಶಿಬಿರಾರ್ಥಿ ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.

Comments powered by CComment

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.