ಬೆಳೆಯುತಲಿದೆ ಸುಂದರ ಜಗತ್ತು, ಸಾಗಿದಷ್ಟು ದಾರಿ ಉದ್ದಕ್ಕೂ ಮುಗಿಲೆತ್ತರದ ಕಟ್ಟಡಗಳ ಗುಂಪು. ನಾ ಮುಂದು ನೀ ಮುಂದು ಎನ್ನುವ ದೊಡ್ಡ ದೊಡ್ಡ ಕಾರ್ಖಾನೆಗಳು. ಮರೆತೇ ಹೋಗುತ್ತಿದೆ ರೈತನಂಬ ಅದ್ಬುತ ಅನ್ನದಾತನನ್ನು....!

ನನ್ನ ಮನೆ ಹಿಂದಿನ ಜಾಗವೆಲ್ಲ ರೈತರ ಭೂಮಿಗಳು. ಹಿತ್ತಲ ಬಾಗಿಲು ತೆರೆದು ನೋಡಿದರೆ ಸ್ವಚ್ಛವಾಗಿಸಿದ ರೈತನ ಹೊಲಗಳು. ದಿನವಿಡೀ ಬಂದು ನೋಡುವನು ಮುಗಿಲೆತ್ತರಕ್ಕೆ ಮಳೆಯ ಬರುವಿಕೆಗಾಗಿ. ಅಂದೊಂದು ದಿನ ಕಪ್ಪು ಮೋಡವ ಕಂಡು ಆನಂದಿಸಿದ ಅವನ ಆನಂದಕೆ ಪರಿವೆಯೇ ಇರಲಿಲ್ಲ. ಜಾತ್ರೆಯ ಸೊಬಗಿನಂತೆ ಸೇರಿರುವ ಜನ, ಜಿನುಗು ತುಂತುರು ಮಳೆಗೆ ಕುಣಿಯುತ್ತಿರುವ ರೈತರ ನೃತ್ಯ ನೋಡಲು ನನ್ನೆರಡು ಕಣ್ಣು ಸಾಲದು. ಬರುತ್ತಿರುವರು ಹಾದಿಯಲಿ ಜೋಡೆತ್ತಿನ ಬಂಡಿಯಲಿ. ತನ್ನ ಹೆಂಡತಿ ಮಕ್ಕಳೊಂದಿಗೆ ಬಂಡಿಯಿಂದ ಇಳಿದ. ಹೆಂಡತಿ ಪೂಜೆ ಮಾಡತೊಡಗಿದಳು ದನಕರುಗಳಿಗೆ, ಹಸನಾಗಿರುವ ಭೂಮಿ ತಾಯಿಗೆ. ಉಡಿಯನ್ನುಟ್ಟು ಕೂಡಿದರೂ ಬಂಡಿಯನು ಬಿತ್ತಲು ಕಾಳು ಕಡಿ, ಅಂದು ಏನು ಮಾಡುತ್ತಿರುವರು ಏನೂ ಅರಿಯದ ವಯಸ್ಸು ನನ್ನದು. ಕೆಲಸದ ಬಿಡುವಿರದೆ ಆಟೋಟದಲ್ಲಿ ತೊಡಗಿದ ನಾನು ಎಂಟು ದಿನಗಳ ನಂತರ ಮತ್ತೆ ಮನೆಯ ಹಿಂದೆ ಹೋದರೆ ಹಸಿರಿನಿಂದ ತುಂಬಿದ ಸುಂದರ ಸಾಲುಗಳು, ಅದರ ಮಧ್ಯೆ ಊಟಕ್ಕೆ ಕುಳಿತ ಕುಟುಂಬ , ಜೋಡೆತ್ತು ಇವೆಲ್ಲವನು ನೋಡುತ ನೆನಪಾದದ್ದು ನನ್ನ ಶಾಲೆಯ ಗಣಿತ ಶಿಕ್ಷಕರು. ಅಲ್ಲಿನ ಹಸಿರಿನಿಂದ ಬೆಳೆದ ಸಾಲುಗಳು ನಾನು ಕಲಿತ ಗಣಿತದಲ್ಲಿನ ಸ್ಕೇಲಿನಂತೆ ನೇರವಾಗಿ ಇದ್ದವು. 

ಪಾವನ ತೀರ್ಥ ಗಂಗಾಜಲದಿ ಮಿಂದು ಹೋದ ಪಾಪಗಳೆಷ್ಟೋ?
ಹನಿಗೂಡಿದ ಮಳೆ ಇಬ್ಬನಿಯಲ್ಲಿ ಹರಿದು ಹೋದ ಭಾಷ್ಪಗಳೆಷ್ಟೋ?
ನಿಶಾಚಾರವಾದ ಮಾಯಾ ಜಗತ್ತಿನಲ್ಲಿ ನೆರಳಿಗೆ ನೇರಳಾದ ಕದನವಿದು
ಎಂಬ ನಾನ್ನುಡಿ ನೆನಪಾಯಿತು. ಅವರ ಉಡುಗೆ ತೊಡುಗೆಗಳು, ಬಿಸಿಲು ಝಳದ ತಾಪಕ್ಕೆ ಮಲಗದೇ ಒಡಲ ಪ್ರಾಣ ಪಕ್ಷಿಯನ್ನು ನೆಟ್ಟುಸಿರು ವಸುದೇಯೊಡೆಯಲಿ .... ಕನಸ್ಸುಗಳ ತುಂಬಿಕೊಂಡು ಹಚ್ಚಹಸುರಿನಲಿ ನನಸಾಗುವ ಹೆಬ್ಬಯಕೆಯ ಹೃದಯದಲ್ಲಿ, ಹೊತ್ತು ಕಾಯದ ರಕ್ತದಲ್ಲಿ ತೋಯ್ದ ಬೀಜಗಳನ್ನು ಬಿತ್ತಿ ಬೆಳೆ ತೆಗೆಯುವ ಗಟ್ಟಿಗರು ಇವರು ಎಂಬಂತೆ ನನ್ನ ಕಣ್ಣುಗಳು ತಂಪಾದವು. ಅವರ ಕಷ್ಟಗಳ ಕಂಡು ಮನಸ್ಸು ಹಾತುರಿಯುತ್ತಿತ್ತು. ಸುರಿಯುವ ಮಳೆಯಲಿ ಅರ್ಧಮರ್ಧ ತೊಯ್ದ ಬಟ್ಟೆಯಲ್ಲಿ ಗಿಡದ ಕೆಳಗೆ ಕುಳಿತಿರುವುದು. ಮಳೆ ನಿಂತ ಮೇಲೆ ಕೆಲಸ, ಬೆಳೆ ಬೆಳೆದ ಮೇಲೆ ದೃಷ್ಟಿ ಬೊಂಬೆಯಂತೆ ಮನುಷ್ಯನ ಆಕಾರ ಹೋಲುವ ಬೆದರು ಬೊಂಬೆಯನ್ನು ನೇತು ಹಾಕಿದರು. ಬೆಳೆದ ಪಸಲನು ರಾಶಿ ಮಾಡುವುದು ಎತ್ತಿನ ಸಹಾಯದಿಂದ. ರಾಶಿ ಮಾಡುವುದು, ಗಾಳಿಗೆ ರಾಶಿಗಳನ್ನು ತೂರಿ ಸ್ವಚ್ಛ ಮಾಡುವುದು ನೋಡಲು ಒಂದು ಸೊಬಗು. ಒಂದು ವರ್ಷ ಕಷ್ಟಪಟ್ಟ ಆ ವ್ಯಕ್ತಿಯ ಬೆಳೆ ಮಾರಿದ ಮೇಲೆಯೂ ಅದೇ ರೀತಿಯ ನಡವಳಿಕೆ, ಮತ್ತೆ ಮೋಡದ ಕಡೆ ನೋಡುತ್ತಿರುವುದ ಕಂಡೆ.

ಹಸಿದ ಹೊಟ್ಟೆಯನ್ನು ತುಂಬುವ ಕರುಣಾಮಯಿ...!
ಎಲ್ಲರ ಹೊಟ್ಟೆ ತುಂಬಿಸುವದಕ್ಕಾಗಿ ಶ್ರಮಿಸುವ ಶ್ರಮಜೀವಿ...!
ಜಗದೊಡೆಯ ನೀನು ನೀನೆ ನಿಜವಾದ ರಾಜನು....!

ಹೀಗೆ ನಾನು ನೋಡಿದ ಅದ್ಭುತ ರೈತನ ಕಥೆ, ಅವನ ಕೆಲಸದಲ್ಲಿ ದೇವರ ಕಂಡೆ, ಅವನೊಂದಿಗೆ ದೇವರು ಸದಾ ಇರುವನೆಂದು ತಿಳಿದೆ.

ಲೇಖಕರ ಪರಿಚಯ:

ರಮಾದೇವಿ ಎಮ್. ಹೊನ್ನಕಂಠಿ
ದ್ವಿತೀಯ ಬಿ. ಎಡ್.
ಸಂತ ಅಲೋಷಿಯನ್ ಶಿಕ್ಷಣ ತರಬೇತಿ ಸಂಸ್ಥೆ, ಮಂಗಳೂರು.

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.