Media Release

Mangaluru, Sep 13, 2022 : The tiny tots K.G. section of St Agnes Preparatory school celebrated the Feast of the Nativity of Blessed Virgin Mary very meaningfully.


ಮಂಗಳೂರು : ಸಂತ ಆಗ್ನೇಸ್ ಪೂರ್ವ ಸಿದ್ಧತಾ ಶಾಲೆಯಲ್ಲಿ ಪೂಜ್ಯ ಮೇರಿ ಮಾತೆಯ ಜನ್ಮದಿನವನ್ನು “ಮಾತೆ ಮೇರಿ ನಮಗೆ ಆಶೀರ್ವಾದವನ್ನು ನೀಡಿ”ಎಂಬ ಧ್ಯೇಯದೊಂದಿಗೆ ಆಚರಿಸಲಾಯಿತು.

ಹಬ್ಬದ ಪೂರ್ವ ತಯಾರಿಯಾಗಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 2 ರವರೆಗೆ ನೊವೇನ ಪ್ರಾರ್ಥನೆಯಲ್ಲಿ ಭಾಗವಹಿಸುವ ಮೂಲಕ ಪುಟಾಣಿಗಳು ಮೇರಿ ಮಾತೆಗೆ ಹೂಗಳನ್ನು ಅರ್ಪಿಸುವುದರೊಂದಿಗೆ ಪ್ರೀತಿಯನ್ನು ಭಕ್ತಿ ಪೂರ್ವಕವಾಗಿ ತೋರ್ಪಡಿಸಿ ಮಾತೇ ಮರಿಯಳ ಆಶೀರ್ವಾದವನ್ನು ಪಡೆದುಕೊಂಡರು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಪುಟಾಣಿ ಮಕ್ಕಳು ಹಾಡಿದ ಸುಮಧುರ ಪ್ರಾರ್ಥನೆ ಮತ್ತು ಗೀತೆಗಳೊಂದಿಗೆ ಮುಕ್ತಾಯಗೊಂಡಿತ್ತು. ಶಾಲಾ ಸಂಯೋಜಕರಾದ ಭಗಿನಿ ಲೋನಾ ಮೇರಿ ಎ.ಸಿ ಅವರು ದೀಪ ಬೆಳಗಿಸಿ ಆ ದಿನದ ಮಹತ್ವವನ್ನು ತಿಳಿಸಿಕೊಟ್ಟರು. ತಮ್ಮ ಸಂದೇಶದಲ್ಲಿ ನಮ್ಮನ್ನು ಯಾವಾಗಲೂ ರಕ್ಷಿಸುವ ಕಾಪಾಡುವ ತಾಯಿಯಾಗಿ ಮರಿಯಮ್ಮ ಮಾತೆಯನ್ನು ಪಡೆದಿರುವುದು ನಮ್ಮೆಲ್ಲರ ಪುಣ್ಯ ಎಂದು ತಿಳಿಸಿ, ಅವರಲ್ಲಿರುವ ಮೌಲ್ಯಗಳನ್ನು ಸದಾ ನಮ್ಮಲ್ಲಿ ರೂಪಿಸಿಕೊಳ್ಳಲು ಕರೆಯಿತ್ತರು.

“ಮಾತೆ ಮರಿಯಮ್ಮ ನಿಮ್ಮ ಆಶೀರ್ವಾದ ಎಂದೆಂದಿಗೂ ನಮ್ಮ ಮೇಲಿರಲಿ”.

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.