CT News

Moodbidri, Nov 19 : 'Sadhana',  the association of Catholic Entrepreneurs of Moodbidri deanery, headed by Catholic Sabha, was inaugurated at Corpus Christi Church Hall, here on Sunday, November 18, 2018.

Rolphie D'Costa, president, Catholic Sabha Mangalore Pradesh; Walter Nandalike, founder, Daijiworld Media Group; Anil Lobo, Chairman, MCC Bank; Harry Rego, president, Catholic Sabha Moodbidri deanery graced the inaugural ceremony as chief guests.

Rajesh Mendes, president, Sadhana welcomed the guests and gathering. Harry Rego briefed the activities of Catholic Sabha. Ronald Serrao, secretary rendered the vote of thanks. Avil D'Souza compered the event.


ಮೂಡುಬಿದಿರೆ ವಲಯ ಕ್ರೈಸ್ತ ಉದ್ಯಮಿಗಳ ಸಂಘಟನೆ `ಸಾಧನಾ' ಸೇವಾರ್ಪಣೆ

ಸಕಾರಾತ್ಮಕ ಚಿಂತನೆಗಳಿಂದ ಉದ್ಯಮದ ಯಶಸ್ಸು ಸಾಧ್ಯ-ವಾಲ್ಟರ್ ನಂದಳಿಕೆ

ಮೂಡುಬಿದಿರೆ, ನ.19: ಮೂಡುಬಿದಿರೆ ವಲಯದ ಕಥೋಲಿಕ್ ಸಭಾ ಕಳೆದ ವರ್ಷ ಆಚರಿಸಿದ್ದ ರಜತ ಸಂಭ್ರಮದ ಸವಿನೆನಪಿಗಾಗಿ ಮೂಡುಬಿದಿರೆ ವಲಯದ ಉದ್ಯಮಿಗಳ ಸಂಘಟನೆ ಆಗಿಸಿ ಆಸ್ತಿತ್ವಕ್ಕೆ ತರಲಾಗಿದ್ದ `ಸಾಧನಾ' ಸಂಘಟನೆಯನ್ನು ಕಳೆದ ರವಿವಾರ ಇಲ್ಲಿನ ಕೋರ್ಪುಸ್ ಕ್ರೀಸ್ತಿ ಚರ್ಚ್ ಸಭಾಂಗಣದಲ್ಲಿ ಮಂಗಳೂರು ಪ್ರದೇಶ ಕಥೋಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ರೋಲ್ಫಿ ಡಿಕೋಸ್ತಾ ಉದ್ಘಾಟಿಸಿದರು.

ದಾಯ್ಜಿವಲ್ರ್ಡ್ ಮಾಧ್ಯಮ ಸಮೂಹದ ಸ್ಥಾಪಕ ವಾಲ್ಟರ್ ನಂದಳಿಕೆ ದಿಕ್ಸೂಚಿ ಭಾಷಣಕಾರರಾಗಿದ್ದು ಮಾತನಾಡಿ `ಉದ್ಯಮದಲ್ಲಿ ಹಿನ್ನಡೆಗಳೇನಿದ್ದರೂ ಅಲ್ಪಕಾಲಿಕ. ಸಕಾರಾತ್ಮಕ ಚಿಂತನೆ, ಅತ್ಯುತ್ತಮ ಆಲೋಚನೆಗಳು, ಸವಾಲುಗಳನ್ನು ಎದುರಿಸುವ ಛಲ ಉದ್ಯಮದಲ್ಲಿ ಯಶಸ್ಸಿನ ಮೆಟ್ಟಿಲುಗಳಾಗುತ್ತವೆ. ಸಾಧನಾ ಸಂಘಟನೆಯ ಮೂಲಕ ಹೆಚ್ಚು ಹೆಚ್ಚು ಯುವಕರು ಉದ್ಯಮ ರಂಗದಲ್ಲಿ ಯಶಸ್ವಿಯಾಗುವಂತಾಗಲಿ' ಎಂದರು.

ಮುಖ್ಯ ಅತಿಥಿಯಾಗಿದ್ದ ಎಂಸಿಸಿ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಅನಿಲ್ ಲೋಬೊ ಫೆರ್ಮಾಯ್ ಮಾತನಾಡಿ `ಉದ್ಯಮಿಗಳು ಒಗ್ಗಟ್ಟಿನಿಂದ ಇದ್ದು ಪರಸ್ಪರ ಸಹಕರಿಸುತ್ತಿದ್ದರೆ ಯಶಸ್ಸು ಸಾಧ್ಯ. ಸಾಧನಾ ಸಂಘಟನೆಯ ಮೂಲಕ ಸರಕಾರ ಉದ್ಯಮಗಳಿಗೆ ನೀಡುವ ಸವಲತ್ತುಗಳ ಬಗ್ಗೆ ಮಾಹಿತಿ, ಹಾಗೂ ಹೊಸದಾಗಿ ಉದ್ಯಮರಂಗವನ್ನು ಪ್ರವೇಶಿಸುವವರಿಗೆ ಮಾರ್ಗದರ್ಶನ ಲಭಿಸುವಂತಾಗಲಿ' ಎಂದು ಶುಭಾರೈಸಿದರು.

ಸಾಧನಾ ಅಧ್ಯಕ್ಷ ಉದ್ಯಮಿ ರಾಜೇಶ್ ಮೆಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಥೋಲಿಕ್ ಸಭಾ ಮೂಡುಬಿದಿರೆ ವಲಯಾಧ್ಯಕ್ಷ ಹ್ಯಾರಿ ರೆಗೋ ಪ್ರಾಸ್ತಾವಿಕವಾಗಿ ಮಾತನಾಡಿ ಕಥೋಲಿಕ್ ಸಭಾ ವತಿಯಿಂದ ಸಾಧನಾ ಸಂಘಟನೆಗೆ 25,000 ರೂಪಾಯಿಗಳ ಚೆಕ್ ಹಸ್ತಾಂತರಿಸಿದರು.

ಮೆಲ್ವಿನ್ ಡಿಕೋಸ್ತಾ, ಜೆರಾಲ್ಡ್ ಡಿಕೋಸ್ತಾ, ಜೋಯ್ಲಸ್ ಡಿಸೋಜಾ ಅತಿಥಿಗಳನ್ನು ಪರಿಚಯಿಸಿದರು. ಅವಿಲ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಸಾಧನಾ ಕಾರ್ಯದರ್ಶಿ ರೊನಾಲ್ಡ್ ಸೆರಾವೋ ವಂದಿಸಿದರು.

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.