CT News

Mangaluru, Dec 24, 2022 : Rosario High School , Bolar here celebrated Annual Day and Christmas 'Bandhutva' get together programme.

ರೊಜಾರಿಯೊದಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಕ್ರಿಸ್ಮಸ್ ಸೌಹಾರ್ದ ಕೂಟದ ‘ಬಂಧುತ್ವ’ ಕಾರ್ಯಕ್ರಮ

ರೊಜಾರಿಯೊ ಪ್ರೌಢಶಾಲೆಯ ವತಿಯಿಂದ ಶಾಲಾ ವಾರ್ಷಿಕೋತ್ಸವ ಹಾಗೂ ಕ್ರಿಸ್ಮಸ್ ಸೌಹಾರ್ದ ಕೂಟದ ಪ್ರಯುಕ್ತ ಬಂಧುತ್ವ ಕಾರ್ಯಕ್ರಮ ವಿದ್ಯಾರ್ಥಿಗಳ ಕಲಾ ಪ್ರದರ್ಶನ ನಡೆಯಿತು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜ್ಯ ಸಂಚಾಲಕರ ನೇತೃತ್ವದಲ್ಲಿ ಸರ್ವಧರ್ಮಗುರುಗಳ ದಿವ್ಯ ಉಪಸ್ಥಿತಿಯಲ್ಲಿ ಜರುಗಿತು. ಕಾರ್ಯಕ್ರಮವು ಪ್ರಾರ್ಥನಾ ನೃತ್ಯದೊಂದಿಗೆ ಪ್ರಾರಂಭವಾಗಿ ದ್ವೀಪ ಪ್ರಜ್ವಲನದೊಂದಿಗೆ ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ರಾಮಕೃಷ್ಣ ಮಠ ಮಂಗಳಾದೇವಿ ಇದರ ಸಹಕಾರ್ಯದರ್ಶಿ ಸ್ವಾಮಿಜಿ ಶ್ರೀ ರಘುರಾಮನಂದ ಹಾಗೂ ಮೊಹಿದ್ದೀನ್ ಜುಮ್ಮಾ ಮಸೀದಿ ಕಸಬ ಬೇಂಗ್ರೆ ಇಲ್ಲಿನ ಧರ್ಮಗುರು ಶ್ರೀ ಮಹಮ್ಮದ್ ಶರಿಫ್ ಅನ್ಸಾರಿ ಇವರ ಜೊತೆಗೆ ವಂದ।ಫಾ ।ಆಲ್ಪ್ರೇಡ್ ಜೆ ಪಿಂಟೋರವರು ಜೊತೆಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತಾನಾಡಿದ ಪೂಜ್ಯರು ಶಾಲಾ ವಾರ್ಷಿಕೋತ್ಸವಕ್ಕೆ ಶುಭಾಶಯ ಕೋರಿ ಕ್ರಿಸ್ಮಸ್ ಸೌಹಾರ್ದಕೂಟಕ್ಕೆ ಮೆಚ್ಚುಗೆ ಸೂಚಿಸಿ ಸರ್ವಧರ್ಮ ಗ್ರಂಥಗಳ ಸಾರಾಂಶ ಮನುಕುಲದ ಒಳಿತು , ಸರ್ವರ ಒಳಿತಿನೊಂದಿಗೆ ಸರ್ವಧರ್ಮ ಸಹಬಾಳ್ವೆ ನಡೆಸೋಣ ಎಂದು ಹೇಳಿ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಕ್ಯಾರಲ್ಸ್ ಗೀತೆಯನ್ನು ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.ಕ್ಯಾರಲ್ಸ್ ಟ್ಯಾಬ್ಲೋವನ್ನು ರೊಜಾರಿಯೊ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟರು. ನಂತರ ಶಾಲಾ ವರದಿಯನ್ನು ಹಾಗೂ ಪ್ರಸ್ತಾವಿಕ ಮಾತುಗಳನ್ನು ಆಡಳಿತಾಧಿಕಾರಿ ವಂ।ಫಾ। ವಿನೋದ್ ಲೋಬೊ ವಾಚಿಸಿ PPT ಪ್ರದರ್ಶನ ಪ್ರಸ್ತುತಪಡಿಸಿದರು. ಶಾಲಾ ವಾರ್ಷಿಕ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಸ್ಟಾರ್ ಮೇಕಿಂಗ್ ಸ್ವರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು. ನಂತರ ಅಧ್ಯಕ್ಷೀಯ ಮಾತುಗಳನ್ನು ಆಡಿದ ವಂದ।ಫಾ। ಆಲ್ರ್ಪೇಡ್ ಜೆ ಪಿಂಟೋರವರು ಸಹಬಾಳ್ವೆ ನಮ್ಮೆಲ್ಲರನ್ನು ಒಂದಾಗಿಸಿ ನಮ್ಮಲ್ಲಿ ಸಮಾನವಾದ ಮನಸ್ಥಿತಿ ಉಂಟುಮಾಡಿಸಿ ನಮ್ಮ ಬದುಕನ್ನು ಸಾರ್ಥಕತೆಯೊಂದಿಗೆ ಮುನ್ನಡೆಸುತ್ತದೆ ಆ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನವು ಆದರ್ಶಮಯವಾಗಿ ಸಾಗುವುದು ಎಂದರು.

ನಂತರ ತರಗತಿವಾರು ವಿದ್ಯಾರ್ಥಿಗಳಿಂದ ಕಲಾ ಪ್ರದರ್ಶನದ ಉದ್ಘಾಟನೆ ನಡೆಯಿತು. ನಂತರ ವಿಷಯ ಸಂಘಗಳಾದ ಪರಿಸರ ಸಂಘ, ಇತಿಹಾಸ ಸಂಘ, ಆರೋಗ್ಯ ಸಂಘ, ರೆಡ್ ಕ್ರಾಸ್ /ಪೊಲೀಸ್ ಕೆಡಟ್ /ಪ್ರೇರಣಾ ಕಲಿಕಾ ಚೇತರಿಕಾ ಸಂಘ ಹಾಗೂ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಕಲಾ ಪ್ರದರ್ಶನ ನಡೆಯಿತು. ನಂತರ ಕಾರ್ಯಕ್ರಮದ ಬಗ್ಗೆ ಆಡಳಿತಾಧಿಕಾರಿಯವರು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ತೀರ್ಪುಗಾರರಾಗಿ ನಿವೃತ್ತ ಶಿಕ್ಷಕಿ ಎಲಿಜಬೆತ್ ರೋಚ್ ಮತ್ತು ರೂಪನಾಯಕ್ ಮತ್ತು ಶಿಕ್ಷಕಿ ಶ್ರೀಮತಿ ಡಯಾನ ಡಿಸೋಜ ಸಹಕರಿಸಿದರು.

ಶಾಲಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ವಂ।ಫಾ ವಿನೋದ್ ಲೋಬೊ , ಮುಖ್ಯೋಪಾಧ್ಯಾಯಿನಿ ಆಲಿಸ್ ಕೆ.ಜೆ , ರೊಜಾರಿಯೊ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಮೇವಿಸ್ ಸೇರಾವೊ , ಶಿಕ್ಷಕ - ಶಿಕ್ಷಕೇತರ ಸಿಬ್ಬಂದಿಗಳು , ಪೋಷಕ ರಕ್ಷಕ ಸಂಘದ ಮುಖಂಡರುಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆಲಿಸ್ ಕೆ.ಜೆ ಸ್ವಾಗತಿಸಿ ಶಿಕ್ಷಕ ಪ್ರದೀಪ್ ಡಿ.ಎಮ್ ಹಾಗೂ ವಿದ್ಯಾರ್ಥಿನಿ ಹಿದಾ ನಿರೂಪಿಸಿದರು.

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.