Belthangady, Sep 4, 2019 : Holy Redeemer School held a meaningful celebration of Teacher's Day.


ಬೆಳ್ತಂಗಡಿ ಹೋಲಿ ರಿಡೀಮರ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ 

Sep 4 : ಡಾ, ಸರ್ವಪಳ್ಳಿ ರಾಧಾಕೃಷ್ಣನ್ ರವರ ಜನುಮದಿನವಾದ ಶಿಕ್ಷಕರ ದಿನವನ್ನು ಬೆಳ್ತಂಗಡಿ ಹೋಲಿ ರಿಡೀಮರ್ ಶಾಲೆಯಲ್ಲಿ ಶಿಕ್ಷಕ ಸಂಘ ಮತ್ತು ವಿದ್ಯಾರ್ಥಿಗಳು ವಿನೂತನವಾಗಿ ಆಚರಿಸಿದರು. ವಿದ್ಯಾರ್ಥಿಗಳು ಶಿಕ್ಷಕರಿಗೆ ಹಲವಾರು ಅದೃಷ್ಟ ಆಟಗಳನ್ನು ಏರ್ಪಡಿಸಿದ್ದರು. ವಿದ್ಯಾರ್ಥಿನಿ ಅಲ್ವಿಯಾ ಮತ್ತು ಸಹಶಿಕ್ಷಕಿ ಶ್ರೀಮತಿ ರೆನಿಟಾ ಶಿಕ್ಷಕರ ದಿನದ ಕುರಿತು ಮಾತನಾಡಿದರು.

ಶಿಕ್ಷಕ ರಕ್ಷಕ ಸಂಘದ ಸದಸ್ಯರಾದ ಶ್ರೀ ವಿನ್ಸೆಂಟ್ ಡಿ’ಸೋಜ ರವರು ಉತ್ತಮ ಗುರಿ ಮತ್ತು ಗುರುಗಳಿಂದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ಸಾಧ್ಯ ಎಂದು ನುಡಿದರು. ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು, ಸದಸ್ಯರು ತಮ್ಮ ಮಕ್ಕಳ ಭವಿಷ್ಯದ ದಾರಿದೀಪವಾಗಿರುವ ಶಿಕ್ಷಕ ವೃಂದಕ್ಕೆ ಶುಭಾಶಯ ಗೀತೆಯನ್ನು ಹಾಡಿ ಪ್ರೀತಿಯ ಕಾಣಿಕೆಯನ್ನು ನೀಡಿದರು.

ಶಾಲಾ ಸಂಚಾಲಕರಾದ ವಂ. ಫಾ. ಬೊನವೆಂಚರ್ ನಝ್ರೆತ್ ರವರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವ ಶಿಕ್ಷಕ ವೃಂದಕ್ಕೆ ಶುಭಾಶಯವನ್ನು ಕೋರಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಂ. ಫಾ . ಜೇಸನ್ ಮೋನಿಸ್ ರವರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು. ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಮತಾ ಶೆಟ್ಟಿಯವರ ಮುಂದಾಳತ್ವದಲ್ಲಿ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಮೂಡಿ ಬಂದಿತು. ವಿದ್ಯಾರ್ಥಿನಿಯರಾದ ಆನ್ಸೆಲ್ಮಾ ಮತ್ತು ಪ್ರಿನ್ಸಿಟಾ ಕಾರ್ಯಕ್ರಮ ನಿರೂಪಿಸಿ, ರಿಯೊಲ ಸ್ವಾಗತಿಸಿ, ಪ್ರತೀಕ್ ವಂದಿಸಿದರು.

ಹೋಲಿ ರಿಡೀಮರ್ ಶಾಲೆಯು 15 ವರ್ಷಗಳ ಇತಿಹಾಸವಿದ್ದು, ಎಸ್,ಎಸ್ ಎಲ್ ಸಿ ಯಲ್ಲಿ ಸತತ 5 ವರ್ಷಗಳಲ್ಲಿ ನೂರು ಶೇಕಡಾ ಫಲಿತಾಂಶ ಪಡೆದಿದೆ. ಶಾಲೆಯಲ್ಲಿ ಪಾಠದ ಜೊತೆಗೆ ಆಟ, ಕಲೆ , ಸಾಹಿತ್ಯ ಮತ್ತು ಸಾಂಸ್ಕøತಿಕ ವಿಷಯಗಳಿಗೆ ಗಮನ ನೀಡಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಕಡೆ ಗಮನ ಹರಿಸುತ್ತಿದೆ.


About Most Holy Redeemer Church, Belthangady

Comments powered by CComment

Latest News

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.